ಶೈಖುನಾ ಎ.ಪಿ. ಉಸ್ತಾದರು ಮಂಗಳೂರು ಖಾಝಿ ತ್ವಾಕ ಉಸ್ತಾದರ ಭೇಟಿಯ ವಿಷಯದಲ್ಲಿ ಕೆ.ಎಂ. ಉಸ್ತಾದರು ಮಾಡಿದ್ದ ಫೇಸ್ಬುಕ್ ಪೋಸ್ಟ್ ಬಗ್ಗೆ ಈಗಾಗಲೇ ಸ್ವತಃ `ಕೆ.ಎಂ' ಉಸ್ತಾದ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಅವರೆ ಹೇಳಿದಂತೆ ಉಪಮೆಯಾಗಿ ಬಳಸಿಕೊಂಡಿದ್ದ ಪದವನ್ನು ವಿವಾದ ಮಾಡಲಾಯಿತು, ಹಾಗೂ ಅದರ ಬಗ್ಗೆ ಕೆಎಂ ತುಂಬಾ ವೇಗದಲ್ಲಿ ಪ್ರತಿಕ್ರಿಯಿಸಿ ಸ್ಪಷ್ಟೀಕರಣ ನೀಡಿದ್ದರು. ಆದ್ದರಿಂದ ವಿವಾದವು ತಣ್ಣಗಾಗಬೇಕಾಗಿತ್ತು, ಆದರೆ ಅದು ಆಗುತ್ತಿಲ್ಲ ಎಂಬುವುದು ಬೇಸರದ ವಿಷಯ. ಕರಾವಳಿ ಸುನ್ನಿಗಳ ಒಗ್ಗಟ್ಟನ್ನು ಬಯಸುವ ನಮ್ಮಂತವರಿಗೆ ಹೊಸದಾಗಿ ಬೇರೆಯೆ ವಿವಾದವೊಂದು ಇದೀಗ ಎದ್ದು ನಿಂತಿದೆ.
ಇದೀಗ ಪ್ರಾರಂಭವಾದ ವಿವಾದ ಏನೆಂದರೆ, ಕೆಎಂ ಮೊಂಟುಗೋಳಿ ಅವರ ಫೇಸ್ಬುಕ್ ವಿಷಯವನ್ನು ಇಟ್ಟುಕೊಂಡು ವಿವಾದ ಎಬ್ಬಿಸಿ ಆ ಮೂಲಕ ಎಪಿ ಮತ್ತು ತ್ವಾಕ ಉಸ್ತಾದರ ಭೇಟಿಯನ್ನು ಮರೆ ಮಾಚುವ ಬಗ್ಗೆ ಎಸ್ಬಿ ದಾರಿಮಿ ವಾಟ್ಸಪ್ನಲ್ಲಿ ಹೇಳಿದ್ದಾರೆ ಎಂಬ ಬಗ್ಗೆಗಿನ ಸ್ಕ್ರೀನ್ಶಾರ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಎಸ್ಬಿ ದಾರಿಮಿ ಮಾಡಿದ್ದಾರೆ ಎನ್ನಾಲಾಗಿರುವ ವಿವಾದಾತ್ಮಕ ಸ್ಕ್ರೀನ್ಶಾರ್ಟ್
ಈ ಲೇಖನದಲ್ಲಿ, ನಿಜಕ್ಕೂ ಈ ಸ್ಕ್ರೀನ್ಶಾರ್ಟ್ ನಿಜವೆ ಎಂಬುದನ್ನು ಮೂಲಕ ತಿಳಿಯೋಣ ಬನ್ನಿ.
ವಾಟ್ಸಪ್ನ ಯಾವುದಾದರೂ ಗ್ರೂಪಲ್ಲಿ ನಾವು ಇದ್ದರೆ, ಆ ಗ್ರೂಪ್ನ ತಲೆ ಬರಹದ ಕೆಳಗೆ ನಮ್ಮ ಮೊಬೈಲ್ನಲ್ಲಿ ನಂಬರ್ ಸೇವ್ ಮಾಡಿಕೊಂಡಿರುವ ವ್ಯಕ್ತಿಗಳ ಹೆಸರುಗಳು ಮೊದಲಿಗೆ ಕಾಣಿಸುತ್ತದೆ. ಒಂದು ವೇಳೆ ನಮ್ಮ ಕಾಂಟಕ್ಟ್ ಅಲ್ಲಿ ಯಾರೂ ಇಲ್ಲದಿರುವ ಗ್ರೂಪ್ಗೆ ಸೇರಿಸಿದರಷ್ಟೇ ಗ್ರೂಪ್ ಹೆಸರಿನ ಕೆಳಗೆ ನಂಬರ್ ಕಾಣಿಸುತ್ತದೆ.
ಆದರೆ ಈ ವಿವಾದಿತ ಸ್ಕ್ರೀನ್ಶಾರ್ಟ್ ಅಲ್ಲಿ ಅದು ಕಾಣಿಸುತ್ತಿಲ್ಲ. ಎಸ್ಬಿ ದಾರಿಮಿ ಅವರ ನಂಬರಿನ +91 ನಂಬರ್ ಅಷ್ಟೇ ಕಾಣಿಸುತ್ತದೆ, ನಂತರ ರಫೀಖ್, ರಶೀದ್, ಸಫೀಖ್ ಎಂಬ ಹೆಸರು ಕಾಣಿಸುತ್ತಿದೆ. ಆದ್ದರಿಂದಲೇ ಇಲ್ಲಿ ಏನೋ ಒಂದು ತಪ್ಪಾಗಿದೆ ಅಲ್ಲವೆ.... ನಮ್ಮ ಸಂಶಯ ಇಲ್ಲಿಂದ ಶುರು ಮಾಡೋಣ ಬನ್ನಿ.
ಒಂದು ಗ್ರೂಪಲ್ಲಿ ನಾವು ನಂಬರ್ ಸೇವ್ ಮಾಡಿರುವ ವ್ಯಕ್ತಿಗಳು ಇದ್ದರೆ, ಗ್ರೂಪ್ನ ಹೆಸರಿನ ಕೆಳಗೆ ಆ ಹೆಸರುಗಳೇ ಬರುತ್ತೆ. ಸೇವ್ ಮಾಡಿರದ ನಂಬರ್ ಮೊದಲು ಬರುವುದಿಲ್ಲ.
ಒಂದು ಗ್ರೂಪಲ್ಲಿ ನಾವು ನಂಬರ್ ಸೇವ್ ಮಾಡಿರುವ ವ್ಯಕ್ತಿಗಳು ಇದ್ದರೆ, ಗ್ರೂಪ್ನ ಹೆಸರಿನ ಕೆಳಗೆ ಆ ಹೆಸರುಗಳೇ ಮೊದಲು ಬರುತ್ತೆ ಬರುತ್ತದೆಯೆ ಹೊರತು ಹೆಸರು ಸೇವ್ ಇಲ್ಲದ ನಂಬರ್ ಬರುವುದಿಲ್ಲ. ಆದರೆ ಈ ಸ್ಕ್ರೀನ್ಶಾರ್ಟ್ ಅನ್ನು ಸರಿಯಾಗಿ ನೋಡಿ, ಗ್ರೂಪಿನ ಹೆಸರಿನ ಕೆಳಗೆ ಮೊದಲಿಗೆ +91 ನಂಬರ್ ತೋರಿಸುತ್ತಿದೆ, ಎಸ್ಬಿ ಅವರದ್ದು ಎನ್ನಲಾಗಿರುವ ಹೇಳಿಕೆಯ ಮುಂದಿರುವ ನಂಬರ್ ಕೂಡಾ +91 ಯಿಂದ ಪ್ರಾರಂಭ ಆಗುತ್ತದೆ. ಆದ್ದರಿಂದ ಇದು ಯಾವುದೋ ನಂಬರ್ ಅನ್ನು ಎಸ್ಬಿ ಅವರ ನಂಬರ್ ಹಾಕಿ ಸೇವ್ ಮಾಡಲಾಗಿದೆ.
ಒಟ್ಟಿನಲ್ಲಿ ನನ್ನ ಪ್ರಕಾರ ಇದು ಯಾರೋ ಕಿಡಿಗೇಡಿಗಳು ವಿವಾದವನ್ನು ಜೀವಂತವಾಗಿಡಲು ಬೇಕಾಗಿಯೆ ಮಾಡಿರುವ ಷಡ್ಯಂತ್ರ.
ಅಲ್ಲದೆ ವಾಟ್ಸಪ್ ಗ್ರೂಪ್ನಲ್ಲಿ ನಮ್ಮ ಕಾಂಟಕ್ಟ್ನಲ್ಲಿ ಇಲ್ಲದ ವ್ಯಕ್ತಿಯೊಬ್ಬ ಮೆಸೇಜ್ ಹಾಕಿದರೆ ಆ ನಂಬರ್ನ ಮುಂದೆ ಆ ನಂಬರ್ನ ವಾಟ್ಸಪ್ ಹೆಸರು ಕೂಡಾ ಗೋಚರಿಸುತ್ತದೆ, ಒಂದು ವೇಳೆ ಆ ನಂಬರ್ ನಮ್ಮಲ್ಲಿ ಸೇವ್ ಇದ್ದರೆ ನಾವು ಸೇವ್ ಮಾಡಿಕೊಂಡಿರುವ ಹೆಸರು ಮೆಸೇಜ್ನಲ್ಲಿ ಕಾಣಿಸುತ್ತದೆ. ಉದಾಹರಣೆಗೆ ಕೆಳಗೆ ನೋಡಿ
ಮೇಲಿನ ಚಿತ್ರದಲ್ಲಿ `ಐ ಲವ್ ಯು ಉಮ್ಮ' ಎಂಬ ಹೆಸರಿನ ನಂಬರ್ ನನ್ನ ಕಾಂಟಕ್ಟ್ ಅಲ್ಲಿ ಸೇವ್ ಇಲ್ಲ, ಆದ್ದರಿಂದ ಅಲ್ಲಿ ನಂಬರ್ ಮತ್ತು ವಾಟ್ಸಪ್ ಹೆಸರು ಕಾಣಿಸುತ್ತಿದೆ. ಹಾಗೆಯೆ K.B. asbq ಎಂಬ ನಂಬರ್ ನನ್ನ ಕಾಂಟಕ್ಟ್ ಲಿಸ್ಟಲ್ಲಿ ಇರುವುದರಿಂದ ಅಲ್ಲಿ ಅವರು ಹಾಕಿರುವ ವಾಟ್ಸಪ್ ಹೆಸರು ಕಾಣುತ್ತಿಲ್ಲ. ನಾನು ಯಾವ ಹೆಸರಲ್ಲಿ ಸೇವ್ ಮಾಡಿದ್ದೇನೋ ಅದಷ್ಟೇ ಕಾಣಿಸುತ್ತಿದೆ.
ಹಾಗೆಯೆ ಎಸ್ಬಿ ದಾರಿಮಿ ಅವರ ವಾಟ್ಸಪ್ ಹೆಸರು `ದೇವನ ಗುಲಾಮ' ಎಂಬುದಾಗಿದೆ. ವಿವಾದಿತ ಸ್ಕ್ರೀನ್ಶಾರ್ಟ್ಲ್ಲಿ ಕೇವಲ ಎಸ್ಬಿ ಅವರ ನಂಬರ್ ಮಾತ್ರವಿದೆ, ಅವರ ವಾಟ್ಸಪ್ ಹೆಸರು ಕಾಣುತ್ತಿಲ್ಲ.
ಅಂದರೆ ಬೇರೆ ಯಾವುದೋ ನಂಬರನ್ನು ಎಸ್ಬಿ ದಾರಿಮಿ ಅವರ ನಂಬರ್ ಹಾಕಿ ಸೇವ್ ಮಾಡಿದ್ದಾರೆ. ನಂತರ ಅದರಲ್ಲಿ ಮೆಸೇಜ್ ಹಾಕಿದ್ದಾರೆ.
ಎಸ್ಬಿ ಅವರ ವಾಟ್ಸಪ್ ನಂಬರ್ ಮತ್ತು ವಾಟ್ಸಪ್ ಹೆಸರನ್ನು ಕೆಳಗೆ ನೋಡಬಹುದಾಗಿದೆ.
ಕೆಎಂ ಹಾಕಿರುವ ಫೇಸ್ಬುಕ್ ಪೋಸ್ಟ್ ಆಗಲೇ ಮುಗಿದು ಹೋಗಿರುವ ಕತೆ, ಯಾಕೆಂದರೆ ಅದಕ್ಕೆ ಕೆಎಂ ಆಗಲೆ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಈ ವಿವಾದವನ್ನು ಜೀವಂತವಾಗಿಡಲು ಯಾರೋ ಬಯಸಿದ್ದಾರೆ. ಇಲ್ಲವೆಂದರೆ ಕರಾವಳಿಯ ಕೋಮುಸೌಹಾರ್ಧವನ್ನು ಹಾಳು ಮಾಡಿರುವ, ಮುಸ್ಲಿಂ ವಿರೋಧಿ ಎಂದೇ ಆರೋಪ ಹೊತ್ತಿರುವ ಜಯಕಿರಣದಲ್ಲಿ ವರದಿ ಬರುವುದು, ಅದರ ಜೊತೆಗೆ ಕೆಎಂ ತನ್ನ ಫೇಸ್ಬುಕ್ ಪೋಸ್ಟ್ನ ಕುರಿತು ಸ್ಪಷ್ಟನೆ ನೀಡಿದ ನಂತರವು ಬಂಟ್ವಾಳದಲ್ಲಿ ಅವರ ವಿರುದ್ದ ದೂರು ದಾಖಲಾಗುವುದು ಏನನ್ನು ಧ್ವನಿಸುತ್ತದೆ.
ಇದರ ಹಿಂದೆ ಯಾರಿದ್ದಾರೆ ಎಂದು ತುಸು ಚಿಂತಿಸೋಣ, ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳನ್ನು ಹೊಡೆದುರಿಳಿಸಲು ಕಿಡಿಗೇಡಿಗಳು ವೇದಿಕೆ ರೆಡಿ ಮಾಡಿದ್ದಾರೆ, ಎಚ್ಚರ, ಎಚ್ಚರ, ಎಚ್ಚರ.
ಬರಹ ಇಷ್ಟವಾಗಿದ್ದರೆ ಅಥವಾ ಬರಹದ ಬಗ್ಗೆ ತಕರಾರುಗಳಿದ್ದರೆ ಕಮೆಂಟ್ ಮಾಡಿ. ನಿಮ್ಮ ಕಮೆಂಟ್ ನನ್ನನ್ನು ಇನ್ನೂ ಬರೆಯಲು ಪ್ರೇರೇಪಿಸುತ್ತದೆ.



Comments
Post a Comment