ನಮಾಜ್ ಮಾಡುವ, ಅಜಾನ್ ಕೂಗುವ ಬ್ಯಾರ್ದಿ ದೈವ!

'ಬ್ಯಾರ್ದಿ ಬೂತ' ಅಂತ ಒಂದು ದೈವ ತುಳುನಾಡಿನಲ್ಲಿ ಇದೆ. ಈ ಬ್ಯಾರ್ದಿ ಬೂತ ಕೋಲದ ಆಚರಣೆಯಲ್ಲಿ ದೈವ ನಮಾಜ್ ಮಾಡುತ್ತೆ, ಅಝಾನ್ ಕೊಡುತ್ತೆ! 
ಆಝಾನ್ ಅಂತೂ ಥೇಟ್ ಮಸೀದಿಯ ಮೈಕ್‌ನಲ್ಲಿ ಮೊಳಗಿ ಬರುವ ಆಝಾನೇ. ದೈವ ತನ್ನ ಕೋಲದ ಆಚರಣೆಯಲ್ಲಿ ಮುಸ್ಲಿಮರು ಮಾಡುವಂತೆ ನಮಾಜ್ ಕೂಡಾ ಮಾಡುತ್ತದೆ.

ಕರಾವಳಿಯಲ್ಲಿ ಮುಸ್ಲಿಂ ಪುರುಷರಿಗೆ ಬ್ಯಾರಿ ಎಂದು ಕರೆದರೆ, ಮಹಿಳೆಯರಿಗೆ ಬ್ಯಾರ್ದಿ ಎಂದು ಕರೆಯುತ್ತಾರೆ. ತುಳುನಾಡಿನ ಸಂಸ್ಕೃತಿಯಲ್ಲಿ ಮುಸ್ಲಿಮರು ಅಥವಾ ಬ್ಯಾರಿಗಳು ತುಳುನಾಡಿನ ಬೇರುಗಳೇ. ಹೊರಗಿನವರೇನಲ್ಲ.

  ನಮಾಜ್ ಮಾಡುತ್ತಿರುವ ಬ್ಯಾರ್ದಿ ದೈವ
Pic credit: Tulu Culture and Folklore - Dr. Laxmi G Prasad / YouTube 

ಕರಾವಳಿಯ ಹಿಂದೂಗಳಿಗೆ ಆಝಾನ್ ಆಗಲಿ, ನಮಾಜ್ ಆಗಲಿ, ಮುಸ್ಲಿಮರ ಆಚರಣೆ ಆಗಲಿ, ಇಸ್ಲಾಂ ಧರ್ಮವಾಗಲಿ ಅನ್ಯವಲ್ಲ, ವಿರುದ್ಧವೂ ಅಲ್ಲ. ಈ ಎಲ್ಲವೂ ಇಲ್ಲಿನ ಹಿಂದೂಗಳಿಗೆ ತಮ್ಮ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗ.

ತಲೆಕೆಟ್ಟ ಬಿಜೆಪಿ ಮತ್ತು ಸಂಘಿಗಳು ಮಾತ್ರ ಇಲ್ಲಿನ ಮುಸ್ಲಿಮ ಅನ್ಯರು ಎಂಬಂತೆ ದ್ವೇಷ ಹರಡಿ ಅಝಾನ್, ಮಸೀದಿ ವಿರುದ್ಧ ಅಪಪ್ರಚಾರ ಮಾಡುತ್ತಾರೆ.

ಕೋಲವೊಂದರ ಆಚರಣೆಯಲ್ಲಿ ದೈವವೊಂದು ಆಝಾನ್ ಕೊಡುವ ವಿಡಿಯೋ ಫೇಸ್ಬುಕ್ ಅಲ್ಲಿ ಓಡಾಡ್ತಾ ಇದೆ.

       ಆಜಾನ್ ಕೂಗುತ್ತಿರುವ ಬ್ಯಾರ್ದಿ ದೈವ 
Pic credit: Tulu Culture and Folklore - Dr. Laxmi G Prasad / YouTube 

ವೈರಲ್ ವಿಡಿಯೋದಲ್ಲಿ ಆಝಾನ್ ಕೊಡುತ್ತಾ ಇರೋದು ಬ್ಯಾರ್ದಿ ದೈವವೇ ಎಂಬುವುದು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಬ್ಯಾರ್ದಿ ಬೂತ ಕೋಲದಲ್ಲಿ ದೈವ ನಮಾಜ್ ಮಾಡೋದು ಮತ್ತು ಆಝಾನ್ ಕೊಡುವುದು ಗೊತ್ತಿತ್ತು.

ಹಾಗಾಗಿ ಇದನ್ನು ಬರೆದೆ.

ಅಷ್ಟೇ.

ಬ್ಯಾರ್ದಿ ಬೂತ ಕೋಲದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Comments