ಹುಡುಗೀ

ಬಾಪು ಅಮ್ಮೆಂಬಳ

ಹುಡುಗಿ
ಬಾ ನಾವು ಈ ಅಂಬರದಾಚೆಗೆ
ಹೊರಟು ಬಿಡೋಣ .
ಅಲ್ಲೂ ಚಂದಿರ ,ಚುಕ್ಕಿಗಳಿರಬಹುದು! .
ಅಲ್ಲೊಂದು ಗುಡಿಸಲುಕಟ್ಟಿ,
ಮುಂಜಾನೆ ಮುಂಬಾಗಿಲಿಗೆ   ,
ತಾರೆಯನ್ನೇ ಚುಕ್ಕಿಯಿಟ್ಟು ರಂಗೋಲಿ ಬಿಡಿಸಬಹುದು .!!
        _______
ಮುಸ್ಸಂಜೆಯ ಮುತ್ತಿಗೆ ಅಲೆಗಳೂ  ಜೊತೆಯಾಗಬಹುದು
ಪಿಸುಗುಡುವಿಕೆಗೆ ಅಲ್ಲೂ ಗಾಡ ಕತ್ತಲಿರಬಹುದು ,
ನಡುಮಧ್ಯಾನ್ಹ ಗಂಜಿಚಟ್ನಿಯುಂಡು ,
ಮಜ್ಜಿಗೆ ಕುಡಿಯುತ್ತಾ ಕುಶಲೋಪರಿಯಲ್ಲೇ ಕಳೆಯಬಹುದು .
        _______
ಬಾ ಈಗಲೇ ಹೊರಟು ಬಿಡೋಣ ,
ಇಲ್ಲಿಯ ಒಣತರ್ಕ ,ಕುತರ್ಕಗಳ
ಜಂಜಾಟ ಅಲ್ಲಿ ಇಲ್ಲದಿರಲೂ ಬಹುದು ,
ಹುಡುಗಿ
ಬೇರೆ ಯಾರೂ ಬೇಡ ನಾವಿಬ್ಬರೇ
ದಾರಿಯ ಜಾಡು ಉಳಿಯದಂತೆ ಹೊರಟು ಬಿಡೋಣ ಬಾ..!

Comments