ತೀರದ ತೀರದ ಮೋಹ

-ಬಾಪು ಅಮ್ಮೆಂಬಳ
ಅದೆಷ್ಟು ಗುಟ್ಟುಗಳಿವೆಯೋ ತಣ್ಣನೆ ಹರಿವ ನೇತ್ರಾವತಿಯ ಒಡಲಲ್ಲಿ ??
ಅಮ್ಮಂದಿರ ಮಕ್ಕಳ ಕೊಂದದಕ್ಕಾಗಿ  ಶಾಪವೂ ಅಂಟಿಸಿಕೊಂಡಿದ್ದಾಳೆ .
ಪ್ರಕೃತಿಗೆ ಎಲ್ಲರೂ ಮಕ್ಕಳೇ
ಆದರೆ
ಹೆತ್ತ ತಾಯಿ ಕರುಳ ಸಂಬಂಧ ಪ್ರಕೃತಿಗಾದರೂ ಹೇಗೆ ಗೊತ್ತಾಗುತ್ತೆ ಹೇಳಿ....??
ತನ್ನ ಸೆಳೆತಕ್ಕೆ ಬಂದವರನ್ನೆಲ್ಲಾ  ಮುದ್ದಿಸಿ ,ಲಾಲಿಸಿ ಒಡಲೊಳಗೆಯೇ ಇಟ್ಟು ಕೊಂಡಿದ್ದಾಳೆ ,
ಇದೂ ಒಂದು ತೆರನಾದ ಪ್ರೀತಿಯೇ ಅಲ್ಲವೇ  ??
ಹೀಗೆ ತನ್ನ ಮಕ್ಕಳಿಗೆ ಕೊಡುವ ಈ 'ಕಾಡುಪ್ರೀತಿ'ಗೆ ಯಾರಿಗೆ ಅರ್ಥವಾಗುತ್ತೆ , ಅದೆಲ್ಲವೂ ಅವರಿಗೆ ಕ್ರೌರ್ಯಗಳೇ ,
ಈ ರೀತಿ ಅತೀ ಕಾಡುವ ಪ್ರೀತಿಯೂ ಒಂದು ಕ್ರೌರ್ಯವೇ ಅಲ್ಲವೇ ??

Comments