-ಬಾಪು ಅಮ್ಮೆಂಬಳ
ಹುಡುಗಿ ,
ಈ ತಂಗಾಳಿಯಲ್ಲೇನೋ ಕರಾಮತ್ತಿದೆ ,
ಮಳೆಯೊಂದಿಗೆ ನಿನ್ನ ನೆನಪನ್ನೂ
ಹೊತ್ತು ತಂದಿದೆ .
-------------
ನೀ ಇಷ್ಟಿಷ್ಟೇ ಎದೆಯೊಳಗಿಳಿಯುತ್ತಿರು ,
ನಾ ಕವನ ಕೊಡುತ್ತಲೇ ಇರುತ್ತೇನೆ .
-------------
ಮೊದಲ ಮಳೆಯ ಕರಾಮತ್ತು
ಇಂದೇ ತಿಳಿದಿದ್ದು
ಹುಡುಗಿ,
ನೀ ಪ್ರೀತಿಸುತ್ತಲೇ ಇರು .
-------------
ಅಂಬರಕ್ಕೇನು ತೊಂದರೆಯಿಲ್ಲ ವಿಶಾಲವಾಗಿದೆ ,
ಚುಕ್ಕಿಗಳಿವೆ ,ಶಶಿಯಿದ್ದಾನೆ ಕೇತು ಕೂಡಾ.!
ನನ್ನ ಹೃದಯವಷ್ಟೇನು ಧೀರ್ಘ ,ವಿಶಾಲವಿಲ್ಲ,
ನನ್ನವರು ಮತ್ತು ನೀನು ಮಾತ್ರ.
Comments
Post a Comment