ಮೊಡವೆ ಬಿದ್ದಿದೆ ಹುಡುಗಿ !!

-ಬಾಪು ಅಮ್ಮೆಂಬಳ.

ಮೊಡವೆ ಬಿದ್ದಿದೆ ಕಣೆ ಹುಡುಗಿ !!
ಇಳಿಸಂಜೆಯ ಹೊತ್ತನ್ನೂ ಯಾಕೆ ಮರೆಯುತ್ತಿ ?
ರಾತ್ರಿಯಾಯಿತು ಎದೆಗಿಳಿದು ಬಿಡು ,
ತುಸುವಾದರೂ ಒಲವ ಹರಿಸು ;
ಮೊಡವೆ ಮೂಡಿದೆ ಕಣೆ ಹುಡುಗಿ .

ತುಟಿಯಂಚಲಿ ಹೂನಗುವೊಂದನ್ನು ,
ಬಾಣ ಕಟ್ಟಿ ಎದೆಯಾಳಕ್ಕೆ ಬಿಡು .
ಆ ನೀಲಿ ಕಣ್ಣೇ ನಿಜವ ಅರುಹುತಿದೆ ,
ನಿನ್ನ ಕನ್ನೆಯಲ್ಲೂ ಮೊಡವೆ  ಬಿದ್ದಿದೆ ;
ಹಾಳು ಬಿಗುಮಾನ ಬಿಡು ಹುಡುಗಿ .

ನನ್ನೆದೆಯಾಳ ಇನ್ನೂ ಬೆಚ್ಚಗಿದೆ ;
ಹಾಗೇ ಎದೆಗೆ ಜಾರಿ ಬಿಡು ,
ಈ ಬಾರಿ ಮಾಗಿಯೂ ಸುಳಿಯದು ;
ಬೆಚ್ಚಗಿರಿಸುವ ಕರಾರಿಗೆ ಸಹಿ ಮಾಡಿಯಾಗಿದೆ .
ಮೊಡವೆ ಬಿದ್ದಿದೆ ಕಣೆ ಹುಡುಗಿ.

ನೋಟದಲ್ಲೇ ಇಂಚಿಂಚಾಗಿ ಕೊಲ್ಲದಿರು ,
ಅಮಲೇರಿ ವಾಲಾಡುತ್ತಿದ್ದೇನೆ.
ನನ್ನೊಳಗೆ ಪರಕಾಯ ಪ್ರವೇಶವಾಗಿ ಬಿಡು;
ಈ ಬಾರಿ ಬಂಧ ಮುರಿಯಲೇ ಬಾರದು .
ಮೊಡವೆ ಮೂಡಿದೆ ಕಣೆ ಹುಡುಗಿ !!

Comments