-ಬಾಪು ಅಮ್ಮೆಂಬಳ
ಹೂರೀ ,
ಆತ್ಮದ ಹುಡುಕಾಟದಲ್ಲಿದ್ದೇನೆ ,
ನಿನ್ನ
ಆತ್ಮಾರ್ಥವಾಗಿ ಪ್ರೇಮಿಸಲು ;
ನಿನ್ನ ಇಷ್ಕಿನ ಜಾಲವನ್ನು ತುಸು ಸಡಿಲಿಸಿಬಿಡು .
-------------------------
ಹುಡುಗಿ ,
ರುಮಾಲನ್ನು ತುಸು ಸರಿಸಿಬಿಡು
ನಿನ್ನ ಮುಂಗುರುಳಿನ ನಾಟ್ಯಕ್ಕೆ
ಇಷ್ಕ್ ಹುಚ್ಚೆದ್ದು ಕುಣಿಯಲಿ .
-------------------------
ಹುಡುಗಿ
ನೀ ಒಲವ ಚೂರಿಯಲಿ ಇಂಚಿಂಚಾಗಿ
ಇರಿಯುತ್ತಲೇ ಇರು,
ನಾ ಜೀವ ಕೊಡುತ್ತಲೇ ಇರುತ್ತೇನೆ .
Comments
Post a Comment