-ಬಾಪು ಅಮ್ಮೆಂಬಳ
ಏ ಥೂ ಏನ್ ಜನಗಳಪ್ಪ ನೀವು ,
ದಿನವಿಡೀ ಯುದ್ಧದ ಸಂಗತಿಗಳೇ ಚರ್ಚಿಸುತ್ತಿದ್ದೀರ !
ಬನ್ನಿ ಪ್ರೇಮದ ಬಗ್ಗೆ ಒಂದಿಷ್ಟೇ ಮಾತೆತ್ತುವ ,
ಮತ್ತೆ ನೋಡಿ ಕರಾಮತ್ತು ,ಒಲವೆಂದರೆ ಹಾಗೆಯೇ !!
ಒಂದೇ ಒಂದು ಕ್ಷಣ ಸಾಕು ,
ಎದೆಯಾಳದಿಂದ ಅಡ್ಡಾದಿಡ್ಡಿ ಪ್ರೀತಿಸಿ,
ಮತ್ತೆ ನೋಡಿ ಎದೆಯೊಳಗಿನ ಕರಾಮಾತ್ತು ,
ಈ ಹಾಳು ಲೋಕವೇ ನಿಕೃಷ್ಠ !!.
ಗುಂಡುಗಳಿಲ್ಲದಿದ್ದೇನ್ರೋ ಗುಲಾಬಿಗಳಿಲ್ಲವೇ ?
ಕೆಂಪಗಿರುವ ಕೆಲವೊಂದಿಷ್ಟನ್ನು ಒಲವಿನೊಂದಿಗೆ ಸೇರಿಸಿ ,
ಗೋಡೆಯಾಚೆಗೆ ಎಸೆದು ಬಿಡಿ ,
ಕೋಮಲ ಹೃದಯ ಸಿಗದಿದ್ದರೆ ಮತ್ತೆ ಹೇಳಿ .
ಹೇ ,ಯಾರೋ ಅದು ಯುದ್ಧ ಬೇಕೆನ್ನುವವ ,
ಅವನ ಸೆರೆ ಹಿಡಿದು ;
ಗುಂಡುಗಳಿಲ್ಲದ ಬಂದೂಕ ಗುರಿ ಇಟ್ಟು ಬಿಡಿ ,
ತರುವಾಯ ನಿಮ್ಮೆದೆಯೊಳಗಿನಿಂದ ಬೊಗಸೆ ,
ಪ್ರೀತಿ ಕೊಟ್ಟು ಬಿಟ್ಟು ಕರಾಮತ್ತು ನೋಡಿ !!
ತಥ್ ,ಸುಳ್ಳಾದರೆ ನನ್ನ ಹುಚ್ಚಕವಿಯೆನ್ನಿ ,
ಈ ಹಾಳು ಲೋಕವನ್ನೇ ಪ್ರೀತಿಸತೊಡಗುತ್ತಾನೆ .!!
Comments
Post a Comment