-ಬಾಪು ಅಮ್ಮೆಂಬಳ
BMW ಕಾರು ಚಹಾದ ಕ್ಯಾಂಟೀನ್ ಎದುರಿಗೆ ಬಂದು ನಿಂತೊಡನೇ,ಕ್ಯಾಂಟೀನ್ ಮಾಲಿಕ 'ಸವಾದ್ ಅಲ್ಲಿ ಏನು ಬೇಕು ನೋಡು' ಎಂದು ಕೆಲಸದಾಳುವನ್ನು ಎಚ್ಚರಿಸಿದನು.ಗಾಡಿಯಿಂದ ಇಳಿದ,ಸುಮಾರು 60-70 ವಯಸ್ಸಿನ ವೃದ್ದ 'ಸ್ಪೆಷಲ್ ಟೀ' ಅಂದ. ಸವಾದ್ ಅವನನ್ನು ಕನಿಕರದಿಂದಲೇ ನೋಡಿ ಚಹಾವನ್ನು ಮಾಡಿ ಕೈಗಿಟ್ಟ . ವೃದ್ಧ ಚಹಾವನ್ನು ಕಾರಿಗೆ ಕೊಂಡೊಯ್ದು ಸುಮಾರು 28 ವರ್ಷ ವಯಸ್ಸಿನ ತನ್ನ ಧಣಿಗೆ ಕೊಟ್ಟು ಹೊರಗಡೆ ವಿನಯದಿಂದಲೇ ನಿಂತ.
ಸುಮಾರು ಆರು ತಿಂಗಳಿನಿಂದ ಹೀಗೇ ನಡೆಯುತ್ತಿತ್ತು.ಸವಾದ್ಗೆ ಅಸಮದಾನ 'ಎಲ್ಲಾ ದುಡ್ಡಿನ ಮದ,ಆ ಮುದುಕನಿಗೆ ಅವನ ತಾತನ ವಯಸ್ಸಾಗಿರಬಹುದು ,ಇಳಿದ ಬಂದು ಕುಡಿದರೆ ಏನು ಸನ್ನಿ ,ಕನಿಷ್ಠ ಪಕ್ಷ ಒಂದು ಚಹಾವಾದರೂ ಆ ಮುದುಕನಿಗೆ ತೆಗೆದುಕೊಡಬಹುದಲ್ವ' ಎಂದು ಯಾವಾಗಲೂ ಮನಸಿನಲ್ಲಿ ಮಾತ್ರ ಹಿಡಿಶಾಪ ಹಾಕುತ್ತಿದ್ದದ್ದು ಮಾತ್ರವಲ್ಲ,ಕ್ಯಾಂಟೀನ್ಗೆ ಬರುವ ತನ್ನ ಆಪ್ತ ಗಿರಾಕಿಗಳಿಗೆಲ್ಲಾ ತೋರಿಸಿ ,ಅವರಿಂದಲೂ ಛೀಮಾರಿ ಹಾಕಿಸುತ್ತಿದ್ದ.
ವೃದ್ಧ ಚಹಾದ ಗ್ಲಾಸನ್ನು ಮತ್ತು ದುಡ್ಡನ್ನು ತನ್ನ ಧಣಿಯ ಕೈಯಿಂದ ತೆಗೆದು ಕೊಂಡು ,ನಗುಮುಖದಿಂದಲೇ ಸವಾದ್ನ ಕೈಗಿಟ್ಟು ಕಾರ್ ಹತ್ತಿ ಹೊರಟುಹೋದ.
ಮರುದಿನ ಎಂದಿನಂತೇ ಸವಾದ್ ಕ್ಯಾಂಟೀನ್ ಕೆಲಸ ಕಾರ್ಯಗಳನ್ನು ಮಾಡುತ್ತಿರುವಾಗ,ಅವನ ಆಪ್ತ ಗಿರಾಕಿ ಬಂದವನೇ 'ಸವಾದ್ ನಿನ್ನ BMW ಕಾರಿನ ಯುವಕ ತೀರಿಹೋದನಂತೆ!!' ಸವಾದ್ 'ಹೌದಾ!!?...' 'ಒಳ್ಳೆದಾಯಿತು ಮತ್ತೆ ಎಷ್ಟು ಗತ್ತು ಮತ್ತು ಕಂಜೂಸ್ ಮಾಡುವುದು' ಎಂದು ಗಹಗಹಿಸಿ ನಕ್ಕ.
ಸುಮಾರು ದಿನಗಳ ನಂತರ ಅದೇ BMW ಕಾರು ಕ್ಯಾಂಟೀನ್ ಎದುರುಗಡೆ ಬಂದು ನಿಂತಿತು !!. ಮುದುಕ ಮಾತ್ರ ಕಾರಿನಲ್ಲಿ ಇದ್ದ .ಸವಾದ್'ಏನು ತಾತ ನಿಂ ಧಣಿ ಗೊಟಕ್ಕಂತೆ,ಕೆಲಸ ಮಾಡಿದ್ರಲ್ವ ಶರೀರ ಗಟ್ಟಿ ಇರುವುದು ,ಕುಳಿತಲ್ಲಿಗೆ ಎಲ್ಲಾ ಆದ್ರೆ ಹೀಗೆ, ನಿಮ್ಗೆ ಒಂದು ದಿನಾನೂ ಒಂದು ಗ್ಲಾಸು ಚಹಾ ಕೊಡದೇ ಕೂಡಿಟ್ಟ ಹಣವೆಲ್ಲಾ ಇನ್ನು ಯಾರದೋ ಪಾಲು' ವ್ಯಂಗ್ಯವಾಡಿದ. ಮುದುಕ ಕಾರಿನಿಂದ ಇಳಿದವನೇ 'ಮಗೂ ಹಾಗೆಲ್ಲಾ ಸರಿಯಾಗಿ ತಿಳಿಯದೆ ಯಾರನ್ನೂ ದೂಷಿಸಬಾರದು ,ನನ್ನ ಒಡೆಯ ಕರುಣಾಮಯಿ ,ಒಂದು ಅಫಘಾತದಲಿ ಅವರ ಎರಡು ಕಾಲುಗಳು ನಷ್ಟ ಹೊಂದಿದ್ದರಿಂದ ನಾನೇ ಅವರಿಗೆ ಚಹಾವನ್ನು ಕಾರಿಗೇ ಕೊಂಡೊಯ್ಯುತ್ತಿದ್ದೆ'....ಸಾವಾದಿಗೆ ಭೂಮಿ ಬಾಯಿ ಬಿಡುತ್ತಿರುವಂತೆ ಅನಭವವಾಗುತ್ತಿತ್ತು.'ಇವತ್ತು ಅವರ ನೆನಪಾಯಿತು ,ಅದಕ್ಕೆ ಅವರು ನನಗೆ ಕಾಣಿಕೆಯಾಗಿ ನೀಡಿದ ಈ ಕಾರಿನಲ್ಲಿ, ಅವರ ದಿನಚರಿಯ ನೆನಪಿಗೋಸ್ಕರ ಬಂದಿದ್ದೇನ '......ವೃದ್ದ ತೇವಗೊಂಡ ಕಣ್ಣನ್ನು ಒರೆಸಿ ಹೇಳುತ್ತಿದ್ದ ,ಸವಾದ್ ಪಾತಾಳಕ್ಕೆ ಕುಸಿಯುತ್ತಿದ್ದ...!!
Comments
Post a Comment