-ಬಾಪು ಅಮ್ಮೆಂಬಳ
ಇಂದು ಬುದ್ಧನಿರುತ್ತಿದ್ದರೆ ,
ಕಿಸಾಗೌತಮಿಗೆ ಖಂಡಿತಾ
ಸಾಸಿವೆ ಸಿಕ್ಕೀತು .!!
-------
ಬುದ್ಧನಾಗಬೇಕೆಂದರೆ ಮನೆ ತೊರೆವ ದಿನ
ಪೌರ್ಣಮಿಯಾಗಲೇ ಬೇಕೆಂದಿಲ್ಲ ,
ಜ್ಞಾನ ಪಡೆಯಲು ಭೋದಿಯೇ ಆಗಬೇಕಿಲ್ಲ;
ಆಸೆ ಬಿಡಬೇಕಷ್ಟೆ .
-------
ಶಾಂತಿಗಾಗಿ ಇಬ್ಬಿಬ್ಬರನ್ನು ಬಿಟ್ಟುಕೊಟ್ಟ ,
ಯಶೋಧರೆಯ ದುಗುಡವಿನ್ನೂ ,
ಆರಿಲ್ಲ .!!
-------
ಕೆಂಪು ರಕುತ ಹರಿಯುತ್ತಿದ್ದರೂ
ಬುದ್ಧನದು ಅದೇ ಮಂದಸ್ಮಿತ,
ಆತ ಭೋಧಿ ಆತನಿಗೆಲ್ಲಾ;
ಮೊದಲೇ ತಿಳಿದಿತ್ತು .!!
-------
ಆಸೆಯೆಂದರೇನರಿತ ದಿನ
ಲೋಕಕ್ಕೆಲ್ಲಾ ;
ಬುದ್ಧಪೂರ್ಣಿಮೆ .
Comments
Post a Comment