ವಿಪರ್ಯಾಸ (ಮೈಕ್ರೋನ್ಯಾನೋ)

-ಬಾಪು ಅಮ್ಮೆಂಬಳ
ರಂಝಾನ್ ಸಮಯ...
ಒಬ್ಬ ಮುಸ್ಲಿಂ ಕಂಡಾಬಟ್ಟೆ ಕುಡಿದು ತೂರಾಡುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದ.
ಆತನ ಪರಿಚಯದ ಇನ್ನೊಬ್ಬ  ಮುಸ್ಲಿಂ ,ಆತನನ್ನು ನೋಡಿ ಕೋಪದಿಂದು ಕುದಿದು ,ಕುಡುಕನಿಗೆ ಹಿಗ್ಗಾಮುಗ್ಗ ಥಳಿಸಿದ .  ಸಮಾಧಾನಪಟ್ಟು ಹೊರಟು ಬಂದು ಅಲ್ಲೇ ನಡೆಯುತ್ತಿದ್ದ ಆತನದೇ ಸಂಘಟನೆಯ ಪ್ರತಿಭಟನೆಯಲ್ಲಿ ಸೇರಿ ಘೋಷವಾಕ್ಯ ಮೊಳಗಿಸಿದ ''ಬೀಫ್ ತಿನ್ನಬೇಡಿ ಎನ್ನಲು ,ನಾಯಿಗಳೇ ನೀವು ಯಾರು ? ,ಇದು ಭಾರತ...!!''

Comments