ಎದೆಗೆ ಬಿದ್ದ ಸಾಲು


-ಬಾಪು ಅಮ್ಮೆಂಬಳ

ನನ್ನ ಕುತೂಹಲ ಇನ್ನೂ ತಣಿದಿಲ್ಲ ;
ಅವಳ ಸೊಂಟದ ಮೇಲೆ
ಕೊಡ ಜಾರದೆ ಹೇಗೆ ನಿಲ್ಲುತ್ತೆಂದು !!! .
      _______
ಆ ಮುಂಗುರುಳ ಮಧ್ಯದಲ್ಲೇ,
ನಾ ಜಾರಿ ಬಿದ್ದು ಬಿಟ್ಟೆ ;
ಎದೆ ಇನ್ನೂ ಢವಗುಡುತ್ತಿದೆ .
      _______
ನೀಲ ಕಣ್ಣ ಹೊರಳಿಸಿ
ದುರುಗುಟ್ಟಿದ ದಿನ ,
ಎದೆಯೊಳಗೆ ಗೋಲಿ ಬಿದ್ದು
ನಾ ಪ್ರಾಣ ಬಿಟ್ಟಾಗಿದೆ .
      _______
ಸತ್ತು ಬಿದ್ದ ನನ್ನೊಳಗೆ ,
ಹೂನಗುವೊಂದನ್ನು ಎಸೆದುಬಿಟ್ಟಳು ;
ಅಂದಿನಿಂದ ಹುಚ್ಚನಾಗಿದ್ದೇನೆ.
      _______
ಅವಳ ಬಗ್ಗೆ ಬರೆಯದ ದಿನ ,
ಪದಗಳು ಎದೆಗೆ ಬಿದ್ದು;
ಗೋಳಾಡುತ್ತವೆ .
ಹಾಗೇ ಕಕ್ಕಿ ಬಿಡುತ್ತೇನೆ ,
ಕವಿತೆಯೆಂದು ಹೆಸರಿಡುತ್ತೇನೆ .

Comments