-ಬಾಪು ಅಮ್ಮೆಂಬಳ
ಮರೆತು ಬಿಡು, ಬೇಡ
ಮರೆಯಬೇಡ ನಿನ್ನ ಹಂಗಿಸುವವರ.
ಎದೆಗುಂದದಿರು ಅವರ ಟೀಕೆಗೆ,
ನಿನ್ನಿಂದ ಅವರಿಗೆ ಬಯಸಿದ್ದು ದಕ್ಕಲಿಲ್ಲ.
ಹತಾಸೆ ಅವರಿಗೆ ,ನಿನ್ನ ಕಂಡು.
ಅದಕ್ಕೆ ನಿನ್ನ ಕಂಡು ಹಂಗಿಸುವರೇ.
ನಿನ್ನ ನಾಳೆಯೇನು ಅವರದಲ್ಲ.
ನಿನ್ನ ಹೇಳಲು ಅವರೇನು ದೇವರಲ್ಲ.
ಹಂಗಿಸಲಿ ನಿನ್ನ ಅವರೆಲ್ಲ.
ಮೆಟ್ಟಿ ನಿಲ್ಲು ಅವರ ಎದೆಯನೆಲ್ಲ.
ಟೀಕೆಗಳಿಲ್ಲದೆ ಗುರಿ ಮುಟ್ಟಿದವರಿಲ್ಲ.
ನಿನ್ನೆ ಎಡವಿದ ಜಾಗವ ನೆನಪಿಟ್ಟುಕೊ.
ಗುರಿಯನ್ನಷ್ಟೇ ನೋಡಿಕೊ.
ಹಳ್ಳಕೊಳ್ಳಗಳಿದ್ದರೆ ದಾಟಿಕೊ.
ಹಂಗಿಸುವವರ ಮಾತನ್ನು ತಡೆದಿಟ್ಟುಕೊ.
ಎಷ್ಟು ವೇಗವಾಗಿ ಕೆಳಗೆಸೆಯುತ್ತಾರೋ,
ಅದಕ್ಕಿಂತ ವೇಗವಾಗಿ ಪುಟಿದುಕೂ.
ಟೀಕೆಗೊಳಗಾದವರೇ ,ಮಹಾತ್ಮರೆನಿಸಿದವರೆಲ್ಲಾ
ಹಂಗಿಗೆ ಬಿದ್ದವರೇ ,ಅವರ ಹಂಗಿಸಿದವರೆಲ್ಲಾ.
ಟೀಕೆ, ಹಂಗಿಸುವಿಕೆ ಬೇಡವೆಂದರೆ ,
ಇಲ್ಲಿ ನಿನ್ನದೇನು ಇಲ್ಲ.
ಹಂಗಿಸುವವರು ಹಂಗಿಸಲಿ ಬಿಡು,
ಅವರಿಗೆ ನಿನ್ನದೇನು ದಕ್ಕಲಿಲ್ಲ.
ಚಿಂತೆ ಬಿಡು ದಕ್ಕುವೂದೂ ಇಲ್ಲ !!
Comments
Post a Comment