-ಬಾಪು ಅಮ್ಮೆಂಬಳ
ಒಂದೇ ಒಂದು ಜಾನುವಾರು ತರಬಹುದಾದ ವಾಹನದಲ್ಲಿ ಒಂಬತ್ತು ಜಾನುವಾರುಗಳನ್ನು ತುರುಕಿಸಿ ತರಲಾಗುತ್ತಿತ್ತು .
ಮೂಕ ಪ್ರಾಣಿಗೆ ನೋವಾಗುತ್ತಿತ್ತು, ಅನ್ಯಾಯವಾಗುತ್ತಿತ್ತು .
ಮತ್ತು ;
''ಅನ್ಯಾಯವಾದ ಜೀವಕ್ಕೂ ,ಸೃಷ್ಟಿಕರ್ತನಿಗೂ ಯಾವುದೇ ತಡೆಯಿರಲಿಲ್ಲ..!!"
ಪ್ರಾರ್ಥನೆ ಫಲಿಸಿತು...!!
ಯಾರೋ ಜಾನುವಾರು ರಕ್ಷಕರು ಅವರನ್ನು ಹಿಡಿದು ಥಳಿಸಿದರು..!
ಮತ್ತೂ ಅದೇ....'ಅನ್ಯಾಯ....'
'ಥಳಿಸಲು ಇವರ್ಯಾರು..??'
''ಅನ್ಯಾಯವಾದ ಜೀವಕ್ಕೂ ,ಸೃಷ್ಟಿಕರ್ತನಿಗೂ ಯಾವುದೇ ತಡೆಯಿರಲಿಲ್ಲ......''
ಮತ್ತೂ ಪ್ರಾರ್ಥನೆ ಫಲಿಸಿತು...!
ಥಳಿಸಿದವರು ಹೇಳಹೆಸರಿಲ್ಲದಂತಾದರು...!!
Comments
Post a Comment