-ಬಾಪು ಅಮ್ಮೆಂಬಳ
ಬಾನ ಹಾದಿಯಲಿ ಯಾನ ,
ಭುವಿಯ ಸೇರಲು ವರುಣ;
ನಿನ್ನೊಲವ ಪಡೆಯಲು ,
ನೇತ್ರಾವತಿ ತೀರದವನ ಪಯಣ.
-------------
ಇಷ್ಟೇ ಬೇರೇನಿಲ್ಲ ....!
ಮೋಹಕ ತಂಗಾಳಿಯಿದೆ
ಮೋಡಗಳ ರಾಶಿಯಿದೆ
ಮಳೆ ಬರುವ ಸಂಭವವಿದೆ..
ನೋಟದಲ್ಲೇನೋ ಸಂಚಿದೆ ,
ಎದೆ ಬಡಿತ ಜೋರಾಗಿದೆ
ಒಲವಿನ ಕರೆಯೋಲೆ ಸಿಗುವ ಹಾಗಿದೆ...!!
--------------
ಮಾನ್ಸೂನಿನ ತಂಗಾಳಿಯಲಿ ,
ನಿನ್ನ ಅಧರಗಳ ಸಿಹಿಯಿದೆ .
ಚೆಲ್ಲಿದ ಗುಲ್ಮೋಹರ ದಳಗಲಲಿ
ನಿನ್ನದೇ ರಂಗಿದೆ ,
ಕೊಲ್ಮಿಂಚಿನ ಅಂಚಲಿ
ನಿನ್ನ ಕಣ್ಣೋಟದ ಸೆಳೆತವಿದೆ.
ಒಮ್ಮೆ ನೀ ಬರಬಾರದೇ !?
ಭುವಿಯ ಮುತ್ತುವ ಜಡಿಮಳೆಯಂತೆ...!
-------------
ಮಬ್ಬಾಗಿದೆ ಬಾನ
ಒತ್ತೊಟ್ಟಿಗೆ ಕವಿಮನ,
ಅಳುವಿನೊಟ್ಟಿಗೆ
ಬರಲಿ ಜಡಿಮಳೆ
ಯಾಕೆಂದರೆ
ಅರಿಯದಿರಲಿ ಕವಿಯ
ಅಳಲು ಈ ಜನ.
Comments
Post a Comment