ಪ್ರೇಮ ಪರ್ವ

-ಬಾಪು ಅಮ್ಮೆಂಬಳ
ಅಂಬರದಲ್ಲೀಗ ಪ್ರೇಮ ಪರ್ವ !
ಚಂದಿರ-ವರುಣರಿಗೆ ಶುರುವಾಗಿದೆ ಒಲವು;
ಚಿರಯೌವ್ವನೆ ಭೂರಮೆಯೊಂದಿಗೆ..!
ಜೊತೆಗೆ ,ಒಲಿಸಿಕೊಳ್ಳಲು ಪ್ರೇಮಯುದ್ಧ.!
      -----
ರಣರಂಗವಾಗಿದೆ ಅಂಬರದಂಗಳವೀಗ
ಚಂದಿರ ,ವರುಣರಿಗೆ ಭಾರೀ ಸಂಘರ್ಷ;
ತಲವಾರುಗಳ ಝಳ
ಹೊಡೆದಾಟದ ಸದ್ದೂ ಜೋರಾಗಿದೆ.!!
        -----
ಯುದ್ಧ ನಿಂತಿತು ಚಂದಿರ ಗೆದ್ದ  ,
ಸೋತ ವರುಣ 'ಧೋ' ಅಳತೊಡಗಿದ !
ಮೃದು ಹೃದಯದ ಭೂರಮೆ ,
ವರುಣನಿಗೆ ಒಲಿದು ಬಿಟ್ಟಳು...!!
      -----
ಸೋತುಗೆದ್ದವ ಪ್ರಣಯಕ್ಕಿಳಿದು ಪಿಸುಮಾತಾಡುತ್ತಾ ,
ಚಂದಿರನ ನೋಡಿ ಕಿಸಕ್ಕನೇ ನಕ್ಕ ;
ಗೆದ್ದು ಸೋತ 'ಧೀರ' ಚಂದಿರ
ಎದೆಯುಬ್ಬಿಸಿ ಮುಖಸಿಂಡರಿಸಿದ !!

Comments