ಯಾರು ಕಳ್ಳ !! ?? (ಮೈಕ್ರೋನ್ಯಾನೋ)

-ಬಾಪು ಅಮ್ಮೆಂಬಳ
ಅವಳ ಚಿನ್ನದುಂಗುರ ಕಾಣೆಯಾಗಿತ್ತು , ಕದ್ದವನು ಇವನೇ ಎಂದು ಅಮಾಯಕನೊಬ್ಬನನ್ನು ತೋರಿಸಿ ಅರೋಪಿಸಿಯೇ ಬಿಟ್ಟಲು..!
ನಿಜಕ್ಕೂ ಆರೋಪಿಗೆ ಆ ಉಂಗುರ ನೋಡಿಯೇ ಇರಲಿಲ್ಲ ,ಇನ್ನ ಕದಿಯೋದೆಲ್ಲಿಂದ ಬಂತು..! ?
ಇವಳು ಪಟ್ಟುಬಿಡದೇ 'ಕದ್ದವ ನಾಶವಾಗಲೆಂದು ದೇವರಿಗೆ ಹರಕೆ ಇಡುವೆ' ಎಂದು ಅಲ್ಲಿದ್ದ ಹೊರಟಲು.
ಅಮಾಯಕ ಆರೋಪಿ ಎಲ್ಲರೆದುರು ಆದ ಅವಮಾನದಿಂದ ಅದೇ ಚಿಂತೆಯಲ್ಲಿ ನಡೆಯುವಾಗ ರಸ್ತೆ ಅಫಘಾತವಾಗಿ ಆಸ್ಪತ್ರೆ ಸೇರಿದ.
ಅಲ್ಲಿ ಆಕೆ ಹಿರಿಹಿರಿ ಹಿಗ್ಗಿ ಹರಕೆ ಸಂದಾಯ ಮಾಡಿ , ಮನೆಗೆ ಹಿಂತುರುಗಿದಾಗ ಮನೆಯ ಮೂಲೆಯಲ್ಲಿ ಚಿನ್ನದುಂಗುರ ಪತ್ತೆಯಾಯಿತು..!!
ಮರು ದಿನ ಆಕೆ ರಸ್ತೆ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದಳು.

Comments