-ಬಾಪು ಅಮ್ಮೆಂಬಳ
ಬಸ್ಸು ನಿಲ್ದಾಣದಲ್ಲಿ ಆ ಕಳ್ಳ ನಿಂತಿದ್ದ ,ಸುತ್ತಮುತ್ತಲಿನವರಿಗೆ ಆತನ ಕಳ್ಳತನದ ಪರಿಚಯವಿತ್ತು ಆದರೆ ಇತ್ತೀಚೆಗೆ ಕದಿಯುತ್ತಿಲ್ಲ , ಬೇಡಿ ತಿನ್ನುತ್ತಿದ್ದ.
ಆತನ ಹತ್ತಿರವೇ ಕುಡುಕನೊಬ್ಬ ಕಂಠಮಟ್ಟ ಕುಡಿದು ಬಿದ್ದಿದ್ದ . ಯಾರೂ ಯಾರನ್ನೂ ಗಮನಿಸುತ್ತಿಲ್ಲ .
ಹಳೇ ಕಳ್ಳ ಕುಡುಕನ ಪ್ಯಾಂಟಿನ ಹತ್ತಿರ ತಡಕಾಡುವುದನ್ನು ಯಾರೋ ನೋಡಿ ''ಕಳ್ಳ ಕದಿಯುತ್ತಿದ್ದಾನೆ '' ಬಾಂಬ್ ಹಾಕಿಬಿಟ್ಟ....!
ಅಷ್ಟೇ ಸಾಕಿತ್ತು ,ಎಲ್ಲರೂ ಉಚಿತವಾಗಿ ಕರಸೇವೆ ಮಾಡಿಬಿಟ್ಟರು .
ಎಲ್ಲರಿಗೂ ಸಮಾಧಾನ...!
ಆದರೆ ಕುಡುಕ ಹಾವು ಕಚ್ಚಿ ಸತ್ತೇ ಹೋಗಿದ್ದ.
Comments
Post a Comment