-ಬಾಪು ಅಮ್ಮೆಂಬಳ
ಹಬ್ಬವಿತ್ತು ಶಿವಪ್ಪಜ್ಜನ ಮನೆಯಲ್ಲಿ !!
ಕಬ್ಬು ,ಲಡ್ಡು ,ಸಾಟು ,ಭರ್ಜರಿ ಸ್ವೀಟು .
ಮನೆಯೇ ಹಾರಿ ಹೋಗುವಷ್ಟು ಗೌಜಿಯಿತ್ತು
ಮನೆಯೊಳಗೆ ಹೊಳೆಯುವ ಹೃದಯಗಳಿತ್ತು !!
ಕೊಟ್ಟಿಗೆ ,ಮೂಡೆ ,ಉಪ್ಪುಕರಿ , ಪಾಯಸ ;
ಹೊಟ್ಟೆಗೆ ಆಯಸ, ಹೃದಯ ಉಲ್ಲಾಸ .
ಮುಂದಿನ ಹಬ್ಬಕ್ಕೆ ಬೇಟಿಯಾಗುವೆ ;
ಬೀಡ ಹಾಕಿಕೊ ಎಂದ ಹಸಿವೆ ದಡಬಡನೆ ಓಡಿದ.
ದೂರದಲ್ಲಿ ಕಾಣುತ್ತಿದ್ದ ಮರವೊಂದರ ಗೆಲ್ಲಿನಲ್ಲಿ,
ಹಸಿವೆ ತಾಳಲಾರದೇ ಅರಚಾಡುತ್ತಾ ,
ನೇಣು ಹಾಕಿ ವಿಲವಿಲನೇ ಒದ್ದಾಡಿ ;
ಪ್ರಾಣ ಬಿಡುತ್ತಿದ್ದ ಕೋಮುವಾದ.
This comment has been removed by a blog administrator.
ReplyDelete