ನನ್ನ ಕನ್ನಡ 💕

-ಬಾಪು ಅಮ್ಮೆಂಬಳ
ನನ್ನ ಕನ್ನಡವೆಂದರೆ ,
ಮೊದಲ ಅಕ್ಷರ ತಿದ್ದಿದ 'ಅಬ್ಬ'
ಬಾಲವಾಡಿಯಲಿ ಘಂಮ್ಮೆನ್ನುವ ಉಂಡೆ ಕೊಡುತ್ತಿದ್ದ ಲೀಲ ಚೀಚರ್
ಕತೆ ಹೇಳುತ್ತಿದ್ದ ಬಾಯಮ್ಮ ಚೀಚರ್

ಕನ್ನಡವೆಂದರೆ ಬಾಲಮಂಗಳ
ಅದನ್ನು ತರುತ್ತಿದ್ದ ಮಾವ
ಓದೆಂದು ಪುಸ್ತಕ ಕೊಡುತ್ತಿದ್ದ ಭಾರತಿ ಟೀಚರ್
ಅಭಿಜಿತಿಗಿಂತ ಮೊದಲೇ , ನನಗೇ ಕತೆ ಪುಸ್ತಕ ಕೊಡುತ್ತಿದ್ದ ತಂಗಿ ರಕ್ಷಿತ

ನನ್ನ ಕನ್ನಡವೆಂದರೆ ,
ತುಂತುರು ಶೇರ್ ಮಾಡುತ್ತಿದ್ದ ಭರತ್
ಈ ಕಾದಂಬರಿ ಓದೆನ್ನುತ್ತಿದ್ದ ರೆನಿಟ
ದಿನಾ ಓದಿಸುತ್ತಿದ್ದ ಜಯಕಿರಣ ಪೇಪರ್

ನನ್ನ ಕನ್ನಡವೆಂದರೆ
ಓದದೇ ಇದ್ದರೆ ಸತ್ತೇ ಹೋಗುವೆ ಎನ್ನುವ ತೇಜಸ್ವಿಯ
ಕಾಡು ,ಮೀನು , ಕಿವಿ , ಮೂಡಿಗೆರೆ
ಉಚಿತ ಓದಿಸುವ ಇಂಟರ್ನೆಟ್ಟು
ಇಷ್ಟು
ಇನ್ನೂ ಇದೆ ಒಂದಷ್ಟು...

Comments