- ಬಾಪು ಅಮ್ಮೆಂಬಳ
ಹುಡುಗಿ ,
ಅಂಗೈಯಲ್ಲೊಂದು ಹಣತೆ ಹಚ್ಚಿ ,
ಕಣ್ರೆಪ್ಪೆ ಮುಚ್ಚಿ ಹುಡುಕು ,
ಆ ಕ್ಷಣ ನಾನಲ್ಲಿರುತ್ತೇನೆ .
______
ನೀಲಿ ಕಂಗಳ ಕಂಡ ದಿನ
ನನ್ನೆದೆಯೊಳಗೆ
ಹಣತೆ ಇಟ್ಟಾಗಿದೆ
ಬಾ ಬೆಳಕಾಗು .
_______
ಸರಿಯಾಗಿ ಕೇಳಿಸಿಕೊ ಹುಡುಗಿ,
ನಿನ್ನೊಳಗೆ ಒಲವು ಚಿಗುರಿದ್ದರೆ
ಹೊರಗಡೆಗೊಮ್ಮೆ ಕಣ್ಣು ಹಾಯಿಸು ,
ನಿನ್ನೂರಿನ ಪರ್ವತದಂಚಿಗೆಲ್ಲಾ
ಹಣತೆ ಹಚ್ಚಿಟ್ಟಿದ್ದೇನೆ .
______
ಹಣತೆಗಳನು ನಿನ್ನೂರಿಗೆ
ತೇಲಿ ಬಿಟ್ಟಿದ್ದೇನೆ ಹುಡುಗಿ ,
ಮಿನುಗು ಬೆಳಕು ಕಂಡಾಗ ,
ನನ್ನನೊಮ್ಮೆ ನೆನೆದು ,
ಮದರಂಗಿ ಹಚ್ಚಿದ ಅಂಗೈಯನೊಮ್ಮೆ ನೋಡಿಬಿಡು .
Comments
Post a Comment