ನೋಟು ಬ್ಯಾನಿನ ನನ್ನವರ ಸಾಲು...!

-ಬಾಪು ಅಮ್ಮೆಂಬಳ
ನೂರ್ಮೂವತ್ತು ಕೋಟಿಯಲ್ಲಿ ಹೋದವರು
ಯಕಶ್ಚಿತ್ ನೂರು ಜನ .
ಅವರೆಲ್ಲರೂ ನನ್ನವರೇ ; ಮನುಷ್ಯರು .
        ____________
ಪ್ರಾಣಿಗಳ ಮೇಲೂ ಪ್ರಯೋಗಿಸುವಂತಿಲ್ಲ
ದಯಾ ಸಂಘವಿದೆ ಅಣಬೆಗಳಂತೆ.
ಮಾನವ ಪ್ರಾಣಿ ಅಲ್ಲವಲ್ಲ ;
ಅದಕ್ಕಿಂತಲೂ ಕಡೆಯಾ? ತಿಳಿದಿಲ್ಲ !!
        ____________
ಭಕ್ತಿಯ ಉತ್ತುಂಗತೆಗೆ ಸ್ವರ್ಗ ಕಾಣುತ್ತದೆ ,
ಸ್ವರ್ಗವೆಂದರೆ ಯಾವ ಜೀವವೂ
ನೋವು ಉಣ್ಣುವಂತಿಲ್ಲ .
ನೋವೆದ್ದರೆ ಆತ ಸ್ವರ್ಗ ದ್ರೋಹಿ !!
        ____________
ಅದೇ ಮೂರು ಕಾಸಿನ ಗುಡಿಸಲು ;
ದೇಶ ದೇಶಗಳ ವೈಷಮ್ಯಕ್ಕೂ ,
ದೇಶದೊಳಗಿನ ವೈಷಮ್ಯಕ್ಕೂ ,
ತೊಡೆ ತಟ್ಟುತ್ತದೆ ,ಕಣ್ಣೀರು ಹರಿಸುತ್ತದೆ .
ಈಗಲೂ , ಅದೇ ಮೂರು ಕಾಸಿನ
ಗುಡಿಸಲು ಒದ್ದೆಯಾಗಿದೆ.
        ____________
ನಿಮಗೆಲ್ಲ ಹೀಗೇ ಅನಿಸುತ್ತದೆ ;
ಹೋದವ ಮುದುಕ ,ಭೂಮಿಯ ಭಾರ .
ಆದರೆ ,
ನನ್ನಜ್ಜನ ಜೀವ ಹಾರುತ್ತಿದ್ದರೆ ;
ನನ್ನೊಳಗೂ ನೋವಿದೆ.
ಇವಾಗೆಲ್ಲ;
ಭಕ್ತಿ ಗೀತೆ ನೆನಪಾಗುದಿಲ್ಲ !!
        ____________
ಹಿಂದಿನ ದಿನಗಳಲಿ,
ಕುರಿ ಮಂದೆಗೆ ಮೇಕೆಯಿತ್ತು.
ಇಂದು
ಮೇಕೆ ಸಹವಾಸ ದೋಷಕ್ಕೊಳಗಾಗಿದೆ.

Comments