-ಬಾಪು ಅಮ್ಮೆಂಬಳ
1
"ಭಯಂಕರ ಚಳಿ ಮಾರ್ರೆ "
"ಬಿಸಿ ನೀರಿಗೆ ಕಟ್ಟಿಗೆ ಬೇಕು"
"ಕಟ್ಟಿಗೆಗೆ ಹಣ ಖರ್ಚು ಮಾಡ್ಬೇಕು"
"ಇನ್ನು ಮುಂದೆ ಈ ದುಡ್ಡು ಇಟ್ಕೊಂಡು ಏನು ಮಾಡೋಣ ಹೇಳಿ......?"
"ದಿನಾ ತಣ್ಣೀರಲ್ಲೆ ಸ್ನಾನ ಮಾಡುತ್ತಿದ್ದ ನಾನು ಇವತ್ತು ಮೂರು ಗೋಣಿ ನೋಟನ್ನು ಒಲೆಗೆ ಹಾಕಿ , ಬಿಸಿ ನೀರಲ್ಲಿ ಸ್ನಾನ ಮಾಡಿದೆ"
------------------
2
ಕಪ್ಪು ಹಣ ಇದ್ದವರೂ ಕೂಡಾ ಇಷ್ಟೊಂದು ತಲೆ ಬಿಸಿ ಮಾಡಿರ್ಲಿಕ್ಕಿಲ್ಲ ,
ಎಲ್ಲಿ ನೋಡಿದ್ರೂ ನನ್ನಂಥಹ ಕಿಸೆ ತೂತಾದವರೇ ತಲೆ ಬಿಸಿ ಮಾಡುತ್ತಿದ್ದಾರೆ
"ಅವನಲ್ಲಿ ಅಷ್ಟು ದುಡ್ಡಿದೆ''
''ಇವನಲ್ಲಿ ಕೋಟಿ ದುಡ್ಡಿದೆ''
'ಇವ ಏನು ಮಾಡ್ಬಹು''
''ಅದು ಇದು ಲಟ್ಟೆ ಪಟ್ಟೆ ......''
___________
"ನಾಳೆಯಿಂದ ವ್ಯಾಪಾರ ಚೇಂಜ್ ಮಾಡ್ಬೇಕು"
" ನೂರು ರುಪಾಯಿಯ ನೋಟುಗಳನ್ನು ರಾಶಿ ಹಾಕಿ ವ್ಯಾಪಾರ ಮಾಡ್ಬೇಕು"
"ಬನ್ನಿ ಬನ್ನೀ ಸಾವ್ರಕ್ಕೆ ಐದ್ ನೋಟ್"
"ಹಂಪಿಯ ಇತಿಹಾಸ ಮರುಕಳಿಸಲಿ"
__________
3
''ಅಣ್ಣಾ ಯಂಕ್ ಲಾ ಚೂರು ತಿಕ್ಕುವಾ ?''
ಎಂದು ದಿನಾಲೂ ಆ ಬಡ್ಡಿಯವನೊಂದಿಗೆ ಹಣ ಕೇಳಿ ಕೇಳಿ ಸಾಕಾಗಿತ್ತು ನನಗೆ .
ಆತ ಶೂರಿಟಿ ,ಚೆಕ್ಕು ಅದು ಇದೂ ಇತ್ಯಾದಿ ಹೇಳಿ ನಕ್ಕು ಹೋಗುತ್ತಿದ್ದ .
ಇಂದು ಬೆಳಿಗ್ಗೆಯೇ ನನ್ನ ಎದುರಲ್ಲಿ ಕಳೇಗುಂದಿದ ಮುಖದೊಂದಿಗೆ ಬಂದು ನಿಂತಿದ್ದ .
ಮೆಲ್ಲನೇ ಕಿವಿಯ ಹತ್ತಿರ ಬಂದು ಉಸುರಿದ
''ಯಲ್ಲೆ ಆಫೀಸ್ ಗ್ ಬಲೆ ಕಾಸ್ ಬೋಡಾಂಡ ಒಂಜಿ ಇರ್ವ ಸಾರ ಕೊರ್ಕ''
______________
4
ದಿನವಿಡೀ ವ್ಯಾಪಾರ ಮಾಡಿ , ಕಿಸೆ ತುಂಬಾ ದುಡ್ಡು ಮಾಡಿದೆ .
ಎಲ್ಲರಿಗೂ ಬೇಕಾಬಿಟ್ಟಿ ಚಿಲ್ಲರೆ ಕೊಟ್ಟೆ
ಯಾಕೆಂದರೆ ಗಿರಾಕಿ ಬೇಕಲ್ವ ? .
ಸಿಕ್ಕಿದ ದುಡ್ಡೆಲ್ಲಾ ಸಾವಿರದ ಮತ್ತು ಐನೂರರದ್ದೇ ಆಗಿತ್ತು .
ಸಂಜೆ ಸ್ನೇಹಿತನೊಂದಿಗೆ ನೂರು ರುಪಾಯಿ ಸಾಲ ತಗೊಂಡು ಊರಿಗೆ ಮುಟ್ಟಿದೆ .
____________
5
ಅವಳು ಬಹಳ ಚಂದದವಳು !!
ಸುಂದರಾಂಗಿ !!
ದಿನಾಲೂ ನನ್ನ ಎದುರಲ್ಲೇ ಹಾದು ಹೋಗುತ್ತಾಳೆ .
ದಿನಾ ಅವಳು ಬರುದಕ್ಕಿಂತ ಹತ್ತು ನಿಮಿಷ ಮುಂಚೆಯೇ ಅಲ್ಲೆಲ್ಲಾ ಸಂಗಂಧ ಹರಡಿರುತ್ತದೆ !! ನಾನು ಕೂಡಾ ಅವಳ ಗಮನ ಸೆಳೆಯಲು ಎಲ್ಲಾ ಕಸರತ್ತು ಮಾಡುತ್ತಿದ್ದೆ .
ಚಂದ ಇದ್ದವರು ದುರಹಂಕಾರಿಗಳಾಗಿರುತ್ತಾರೆ ಎನ್ನುತ್ತಾರಲ್ಲ
ಹಾಗೇಯೇ
ಇವಳು ಕೂಡಾ ಒಂದು ದಿನಾನು ತನ್ನ ಮುಖವೆತ್ತಿ ಸಣ್ಣ ಮುಗುಳ್ನಗು ಬೀರಿದವಳಲ್ಲ .
ಆದರೆ ...
ಇವತ್ತು ಬಾಯಿ ತುಂಬಾ ನಕ್ಕು ಬಿಟ್ಟಳು , ನಾನು ಅಲ್ಲೇ ಮೂರ್ಛೆ ಹೋಗುವುದರಲ್ಲೇ ಇದ್ದೆ .
ಹತ್ತಿರ ಬಂದವಳೇ ''ಹತ್ತು ರುಪಾಯಿಯ ದ್ರಾಕ್ಷೆ ಕೊಡಿ '' ಎಂದು
ಐನೂರರ ನೋಟು ತೊರಿಸಿ ಇನ್ನೊಂದು ಹೂ ನಗು ತೇಲಿಸಿದಳು !!
__________
6
ಯಾನ್ : ಅಜ್ಜಮ್ಮಾ , ನೂದು ರುಪಾಯಿದ ಬಂಗುಡೆ ಕೊರ್ಲೆ .
(ಮೀನ್ದ ಅಜ್ಜಮ್ಮ ಮೀನ್ ತೊಟ್ಟೆಗ್ ಪಾಡ್ವೆರ್ )
ಅಜ್ಜಮ್ಮ : ಇಂದದನೆ ಬಾಲೆ ದೆತೊನು ಬಂಗುಡೆ .
ಯಾನ್ : ಐನೂದೆತ್ತ ಚಿಲ್ಲರೆ ಉಂಡತ್ತೆ .
ಮೀನ್ದ ಅಜ್ಜಮ್ಮ : ಯ್ಯಾ ಯಾವುದನೆ ನಿನ್ನ ಶ್ಯಾಲೆ , ಪಿರ ಕೊರ್ಗೆ ಬಂಗುಡೆ !!
Comments
Post a Comment