ಆದರೆ ನನ್ನ ಪ್ರಶ್ನೆ, ನಾವು ಮುಸ್ಲಿಮರು ಯಾಕೆ ಅದನ್ನು ಖಂಡಿಸಿ ಪೋಸ್ಟ್ ಹಾಕಬೇಕು? ಆತ ಮಾಡಿರುವ ಕೊಲೆಯನ್ನು ಇಲ್ಲಿ ನಾವು ಸಮರ್ಥಿಸದಿದ್ದರೂ ಶ್ರದ್ಧಾ ಕೊಲೆಗಾರನ ತಪ್ಪನ್ನು ನಾವೇಕೆ ಹೊರಬೇಕು?
ಆತ ಮಾಡಿದ ತಪ್ಪು ಆತ ಶಿಕ್ಷೆ ಅನುಭವಿಸುತ್ತಾನೆ. ಇಲ್ಲಿನ ಕಾನೂನು ಆತನನ್ನು ಶಿಕ್ಷಿಸಲಿ. ಇದರ ಬಗ್ಗೆ ಯಾರಾದರೂ ತಕರಾರು ತೆಗೆದರೆ? ಇಲ್ಲ ಅಲ್ಲವೇ.
ಸಹಜೀವಿಯೊಬ್ಬರ ದಾರುಣ ಸಾವಿನ ಸುದ್ದಿಗೆ ನೀವು ಹೇಗೆ ಮರುಗುವಿರೋ, ಹಾಗೆಯೆ ಇಲ್ಲಿನ ಮುಸ್ಲಿಮರು ಮರುಗುತ್ತಾರೆ.
ಛೇ ಹೀಗಾಗಬಾರದಿತ್ತು, ದುಷ್ಕರ್ಮಿಗೆ ಕಠಿಣ ಶಿಕ್ಷೆ ಆಗಿರಬೇಕೆಂಬ ಮನಸ್ಸೇ ಇಲ್ಲಿನ ಹೆಚ್ಚಿನ ಜನರಿಗೆ ಇರುತ್ತದೆ. ಮುಸ್ಲಿಮರಿಗೆ ಕೂಡಾ ಅದೇ ಮನಸ್ಸು ಇರುತ್ತದೆ.
ಮುಖ್ಯವಾಗಿ ಈ ವೇಳೆ ನಮ್ಮ ರಾಜ್ಯದ ಕಲ್ಲಂಗಡಿ ಪ್ರಕರಣವನ್ನು ಉದಾಹರಿಸಿ ಕಲ್ಲಂಗಡಿಗೆ ಮರುಗಿದವರಿಗೆ ಶ್ರದ್ಧಾ ಕೊಲೆಯನ್ನೇಕೆ ಖಂಡಿಸುತ್ತಿಲ್ಲ ಎನ್ನುತ್ತಿದ್ದಾರೆ.
ಮುಖ್ಯವಾಗಿ ಕಲ್ಲಂಗಡಿ ಘಟನೆ ನಡೆದಿದ್ದು ಧರ್ಮ ದ್ವೇಷದ ಕಾರಣಕ್ಕಾಗಿ ಎಂಬುದನ್ನು ನಾವು ಗಮನಿಸಬೇಕು.
ಅದೇನು ಒಮ್ಮೇಲೆ ಹೀಗೆ ಹೀಗೆ ನಡೆದಿದ್ದೇನಲ್ಲ. ಹಲವಾರು ತಿಂಗಳುಗಳಿಂದ ನಡೆಯುತ್ತಿರುವ ದ್ವೇಷಾಭಿಯಾನದ ಮುಂದುವರೆದ ಒಂದು ಘಟನೆ. ಅದು.
ಅಲ್ಲಿ ಸಂತ್ರಸ್ತರ ಪರವಾಗಿ ಸರ್ಕಾರ ಮಾತಾಡಲಿಲ್ಲ. ಅಧಿಕಾರಶಾಹಿ ಸಂಘಟನೆಗಳು ಅದನ್ನು ಸಮರ್ಥಿಸಿ, ಆರೋಪಿಗಳ ಪರವಾಗಿ ನಿಂತರು.
ಒಟ್ಟಿನಲ್ಲಿ ಅಲ್ಲಿ, ಸಂತ್ರಸ್ತರನ್ನೇ ಅಪರಾಧಿ ಎಂಬಂತೆ ಬಿಂಬಿಸಲಾಯ್ತು. ಹೀಗಾಗಿ ನಾಡಿನ ಬಹುಸಂಖ್ಯಾತರು ಘಟನೆ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಆದರೆ ಶ್ರದ್ಧಾ ಪ್ರಕರಣ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಕೃತ್ಯ. ಅದಾಗಿಯೂ ಆರೋಪಿಯ ಪರ ಸರ್ಕಾರ, ಸಮುದಾಯ, ಸಂಘಟನೆ ಹೀಗೆ ಯಾರು ನಿಂತಿಲ್ಲ.
ಅದೊಂದು ಕ್ರೈಂ ಘಟನೆ. ನೆಲದ ಕಾನೂನು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುತ್ತದೆ.
ಒಂದು ವೇಳೆ ಇಲ್ಲಿನ ಸರ್ಕಾರ ಆರೋಪಿ ಪರ ನಿಂತು ಸಂತ್ರಸ್ತೆಗೆ ಅನ್ಯಾಯ ಮಾಡಲು ಪ್ರಯತ್ನಿಸುತ್ತಿದೆ ಎಂದು ತಿಳಿದರೆ, ಕಲ್ಲಂಗಡಿ ಪ್ರಕರಣದಲ್ಲಿ ಧ್ವನಿ ಎತ್ತಿದ ನಾಡಿನ ಅದೇ ಬಹುಸಂಖ್ಯಾತ ಸಮುದಾಯ ಶ್ರದ್ಧಾ ಪರವಾಗಿ ಧ್ವನಿಯೆತ್ತುತ್ತದೆ.
ಈ ನಂಬಿಕೆ ನನಗಂತೂ ಇದೆ.
ಅಷ್ಟೇ ❤️✊🏿
ಬರಹ ಇಷ್ಟವಾಗಿದ್ದರೆ ಅಥವಾ ಬರಹದ ಬಗ್ಗೆ ತಕರಾರುಗಳಿದ್ದರೆ ಕಮೆಂಟ್ ಮಾಡಿ. ನಿಮ್ಮ ಕಮೆಂಟ್ ನನ್ನನ್ನು ಇನ್ನೂ ಬರೆಯಲು ಪ್ರೇರೇಪಿಸುತ್ತದೆ.
Comments
Post a Comment