ರಾಷ್ಟ್ರೀಯವಾದಿ App 'Koo' ಕೈಹಿಡಿಯದ ರಾಷ್ಟ್ರವಾದಿ ಭಕ್ತರು!

ದೇಶದ್ರೋಹಿ ಆಪ್ ಆಗಿರುವ Twitterನ ಬದಲಿಗೆ ಬೆಂಗಳೂರು ಮೂಲದ ಅಪ್ಪಟ ರಾಷ್ಟ್ರೀಯವಾದಿ ಬ್ಯುಸಿನೆಸ್‌ಮ್ಯಾನ್‌ಗಳು ಹುಟ್ಟು ಹಾಕಿದ ಅಪ್ಪಟ ರಾಷ್ಟ್ರವಾದಿ ಆಪ್ ಆಗಿದೆ Koo.

ಈ Koo ಆಪ್ ಬಗ್ಗೆ ನಮ್ಮ ರಾಷ್ಟವಾದಿಗಳು ಅಬ್ಬರದ ಪ್ರಚಾರ ಮಾಡಿದ್ದರು. ಕಂಗನಾ ರಾಣಾವತ್ ಅಂತು Twitter ಮುಗಿಸಿ Koo ಅನ್ನೆ ದೇಶದಲ್ಲಿ ಇರುವಂತೆ ನೋಡುತ್ತೇನೆ ಎಂಬಂತೆ ಪ್ರಚಾರ ಮಾಡಿದ್ದರು.‌

ಅಷ್ಟೇ ಅಲ್ಲದೆ, ಅರ್ದ ಗಂಟೆ ಸಮಯ Koo ಅಪ್ ಓಪನ್ ಮಾಡಿಟ್ಟರೆ ವಾರಕ್ಕೆ 28 ರೂ. ನೀಡುತ್ತೇವೆ ಎಂದು ಕೂಡಾ ಆಪ್‌ನ ಮಾಲಿಕರು ಹೇಳಿದ್ದರು. ಆದರೆ ಯಾವುದೇ ಭಕ್ತರು ಕೂಡಾ ಕೈ ಹಿಡಿಯಲಿಲ್ಲ.

ಈ Koo ಸಂಸ್ಥಾಪಕನ ಹೆಸರು ಅಪ್ರಮೇಯ ಅಂತ. ಇಷ್ಟೆಲ್ಲಾ ರಾಷ್ಟ್ರವಾದಿ ಕಲರ್ ನೀಡಿದರೂ ಭಕ್ತರು Twitter ಬಿಟ್ಟು ಬರಲೇ ಇಲ್ಲ. ಕೊನೆಗೆ ಸಂಸ್ಥಾಪಕ ಅಪ್ರಮೇಯ ಅವರು Koo app ತನ್ನ ರಾಷ್ಟ್ರೀಯ ವಾದಿ ಮುಖ ಕಳಚಿಕೊಳ್ಳಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದರು.

ಆದರೆ ಇದೀಗ ಹೊಸ ವಿಷಯ ಏನೆಂದರೆ, ಈ Koo ಆಪ್ 2022 ಆರ್ಥಿಕ ವರ್ಷದಲ್ಲಿ 202 ಕೋಟಿ ಖರ್ಚು ಮಾಡಿ ಬರೋಬ್ಬರಿ 14 ಲಕ್ಷ ಆದಾಯ ಗಳಿಸಿಕೊಂಡಿದೆ.

ವ್ಯಾಪಾರದ ನೀತಿ ವ್ಯಾಪಾರ ಅಷ್ಟೇ ಆಗಿರಬೇಕು. ಆ ವ್ಯಾಪಾರದಲ್ಲಿ ನೀಯತ್ತಾಗಿ ಇರಬೇಕು. ಅದು ಬಿಟ್ಟು ಧರ್ಮ, ಜಾತಿ, ರಾಷ್ಟ್ರೀಯತೆ ಎಂದೆಲ್ಲಾ ಬೂಸ ಹೊಡೆದ್ರೆ ವ್ಯಾಪಾರ ಎಕ್ಕುಟ್ಟಿ ಹೋಗುತ್ತೆ ಎಂಬುವುದೇ ಮಾರಲ್ ಆಫ್ ದ ಸ್ಟೋರಿ.

ಅಷ್ಟೇ.

Comments