ಡಿವೈಎಫ್ಐ ಜನರ ಬದುಕಿನ ಪ್ರಶ್ನೆಗಳನ್ನು ಎತ್ತಿಕೊಂಡು ನಿರಂತರ ಚಳವಳಿ ಕಟ್ಟುತ್ತಿರುವ ಸಾಮಾಜಿಕ ರಾಜಕೀಯ ಸಂಘಟನೆ. ಈ ಸಂಘಟನೆ ಇದೀಗ ತನ್ನ ನೇತೃತ್ವದಲ್ಲಿ ಮತ್ತೊಂದು ಹೋರಾಟ ಕೈಗೆತ್ತಿಕೊಂಡಿದೆ.
ನೌಶಾದ್ ನಮ್ಮ ನಿಮ್ಮೆಲ್ಲರ ಹಾಗೆ ಕುಟುಂಬವನ್ನು ಸಲಹುವ ಉದ್ದೇಶದಿಂದ ಗಲ್ಫ್‌ನಲ್ಲಿ ಉದ್ಯೋಗಕ್ಕಿದ್ದವರು. ರಜೆಯ ವೇಳೆ ಊರಿನಲ್ಲಿದ್ದಾಗ ಸಂಭವಿಸಿದ ಸಣ್ಣ ಅಪಘಾತಕ್ಕೆ ಒಳಗಾಗಿ ನೌಶಾದ್ ದೇರಳಕಟ್ಟೆಯ ಕೆಎಸ್ ಹೆಗಡೆ ಆಸ್ಪತ್ರೆಗೆ ಸೇರಿದ್ದರು.
ಆದರೆ ಕೆಎಸ್ ಹೆಗಡೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಒಳಗಾಗಿ ನೌಶಾದ್ ತನ್ನ ಒಂದು ಕಾಲನ್ನೆ ಕಳೆದು ಕೊಂಡಿದ್ದಾರೆ. ಇಷ್ಟು ಅನ್ಯಾಯ ಮಾಡಿದ್ದು ಸಾಲದೆ, ಪರಿಹಾರ ನೀಡುವುದಾಗಿ ಭರವಸೆ ನೀಡಿ ಅವರನ್ನು ಆಸ್ಪತ್ರೆ ಆಡಳಿತ ಮಂಡಳಿ ಒಂದುವರೆ ವರ್ಷದ ಕಾಲ ಅಲೆದಾಡಿಸಿದೆ. ಹೀಗೆ ಅವರನ್ನು ಮತ್ತು ಅವರ ಕುಟುಂಬವನ್ನು ಮತ್ತಷ್ಟು ಶೋಷಿಸಿದೆ.
ಮಂಗಳೂರಿನ ದೇರಳಕಟ್ಟೆಯಲ್ಲಿ ಇರುವ ಕೆಎಸ್ ಹೆಗಡೆ ಆಸ್ಪತ್ರೆಯ ಈ ರೌಡಿತನವನ್ನು ಪ್ರಶ್ನಿಸಿ ಮತ್ತು ಸಂತ್ರಸ್ತ ನೌಶಾದ್‌ಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಡಿವೈಎಫ್ಐ ಹೋರಾಟ ಪ್ರಾರಂಭ ಮಾಡುತ್ತಿದೆ.
Comments
Post a Comment