107ನೇ ವಿಧಾನಸಭಾ ಕ್ಷೇತ್ರ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ 92 ವರ್ಷದ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೇಟ್ ಘೋಷಿಸಿದೆ. ಈ ಜೂನ್ ಬಂದರೆ ಅವರಿಗೆ 93 ವರ್ಷಾಗುತ್ತದೆ.
2019 ರ ಅಂಕಿ-ಅಂಶಗಳ ಪ್ರಕಾರ ಈ ಕ್ಷೇತ್ರದ ಒಟ್ಟು ಮತದಾರರು ಎರಡು ಲಕ್ಷದ ಎಂಟು ಸಾವಿರ (2,08,700).
2018 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಅಂದಾಜು 66%ದಷ್ಟು ಮತಗಳು ಚಲಾವಣೆ ಆಗಿತ್ತು. ಅಂದರೆ ಹೆಚ್ಚು ಕಮ್ಮಿ ಒಂದು ಲಕ್ಷದ ಮೂವತ್ತಾರು ಸಾವಿರ (1,36,000).
ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆಯೆ ಬರೋಬ್ಬರಿ 80 ಸಾವಿರವಿದೆ. ಇದು ಕ್ಷೇತ್ರದ ಒಟ್ಟು ಮತಗಳಲ್ಲಿ 38% ಕ್ಕಿಂತಲೂ ಹೆಚ್ಚು. ಹಾಗಾಗಿ ಇಲ್ಲಿ ಮುಸ್ಲಿಮರೇ ಮೆಜಾರಿಟಿ ಸಮುದಾಯ.
ಅಂದರೆ ಒಬ್ಬ ಶಾಸಕ ಗೆಲ್ಲಲು ಸಾಕಾಗುವಷ್ಟು ಮತ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದೊಂದಿಗೆ ಇದೆ. ಕಳೆದ ಬಾರಿ ಶಾಮನೂರು ಶಿವಶಂಕರಪ್ಪ ಅವರು 71 ಸಾವಿರ ಮತಗಳನ್ನು ಪಡೆದು ಗೆದ್ದಿದ್ದರು.
ಅಂದರೆ ಚಲಾವಣೆಯಾದ ಮತಗಳಲ್ಲಿ 52.5% ಮತ ಶಾಮನೂರು ಶಿವಶಂಕರಪ್ಪ ಅವರಿಗೆ ಬಿದ್ದಿತ್ತು.
ಕರ್ನಾಟಕದಲ್ಲಿ ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರವೂ ಒಂದು. ದೇಶದ ರಾಜಕೀಯದಲ್ಲಿ ಮುಸ್ಲಿಂ ಪ್ರಾತಿನಿಧ್ಯ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ, ಕಾಂಗ್ರೆಸ್ ಯಾಕೆ ಇಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರಿಗೆ ಟಿಕೆಟ್ ನೀಡಲಿಲ್ಲ?
ಅದೂ ಅಲ್ಲದೆ, ಮುಸ್ಲಿಮರ ಬಾಹುಳ್ಯ ಅಲ್ಲದ ಏರಿಯಾದಲ್ಲಿ ಮುಸ್ಲಿಮರಿಗೆ ಮನೆಯೇ ಸಿಗುವುದು ಕಷ್ಟವಿದೆ. ಹೀಗಿರುವಾಗ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಬೇರೆ ಸಮುದಾಯ ಹೆಚ್ಚಿರುವ ಕ್ಷೇತ್ರದಲ್ಲಿ ನಿಂತು ಗೆಲ್ಲುವುದು ಭಾರತದ ಮಟ್ಟಿಗೆ ಕಷ್ಟ ಸಾಧ್ಯ.
ಮುಸ್ಲಿಮರ ಪರಿಸ್ಥಿತಿ ಹೀಗಿರುವಾಗ, ಮುಸ್ಲಿಮರು ಗೆಲ್ಲಲು ಸಾಧ್ಯವಿರುವ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ಕಾಂಗ್ರೆಸ್ ಯಾಕೆ ನೀಡುವುದಿಲ್ಲ? ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಮುಸ್ಲಿಮರ ಪಾತ್ರ ಇಲ್ಲವೇ?
ಇಂದು ಬಿಡುಗಡೆ ಮಾಡಿದ ಕಾಂಗ್ರೆಸ್ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಹೆಸರು ಇರುವುದು ನಾನು ನೋಡಿದಂತೆ ಕೇವಲ ಎಂಟು (ಒಬ್ಬ ಮಹಿಳೆ)ಮಾತ್ರ. ಎರಡನೇ ಪಟ್ಟಿಯಲ್ಲಿ ಹೆಚ್ಚೆಂದರೆ ಇನ್ನೂ ಎಂಟು ಇರಬಹುದು (ಎಂಟು ಕೂಡಾ ಕೊಡೋಲ್ಲ, ಅದು ಬೇರೆ ವಿಚಾರ).
ಅಂದರೆ ರಾಜ್ಯದಾದ್ಯಂತ ಮುಸ್ಲಿಮರು ಬೇಷರತ್ತಾಗಿ ಬೆಂಬಲಿಸುವ ಕಾಂಗ್ರೆಸ್ ಪಕ್ಷ, ಈ ಸಮುದಾಯಕ್ಕೆ ಟಿಕೆಟ್ ನೀಡುವುದು ಕೇವಲ 16 ಕ್ಷೇತ್ರ. ರಾಜ್ಯದ ಅತ್ಯಂತ ದೊಡ್ಡ ಸಮುದಾಯದ ಪರಿಸ್ಥಿತಿ ಇದು. ಇದು ಸಾಕೇ? ಈ ಅನ್ಯಾಯವನ್ನು ನಾವು ಪ್ರಶ್ನೆ ಮಾಡಬಾರದೇಕೆ?
ಸಧ್ಯಕ್ಕೆ ಮುಸ್ಲಿಮರ ವಿಶ್ವಾಸ ಗಳಿಸಿರುವ ಮತ್ತು ಮುಸ್ಲಿಮರು ಗೆಲ್ಲಲು ಸಾಧ್ಯವಿರುವುದು, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಉಳಿದಂತೆ ಜೆಡಿಎಸ್ ಸ್ವಲ್ಪ ತಕ್ಕ ಮಟ್ಟಿಗೆ ಮುಸ್ಲಿಮರ ವಿಶ್ವಾದ ಗಳಿಸಿದೆ. ಬಿಜೆಪಿ ಬಹಿರಂಗವಾಗಿ ಮುಸ್ಲಿಮರ ಮತ ಬೇಡ ಎಂದೇ ಹೇಳುತ್ತದೆ. ಹಾಗಾಗಿಯೆ ಕಾಂಗ್ರೆಸ್‌ನೊಂದಿಗೆ ನಾವು ಪ್ರಶ್ನೆ ಮಾಡಬೇಕಿದೆ.
Comments
Post a Comment