ಬಂಟ್ವಾಳದಲ್ಲಿ ಮುಸ್ಲಿಮರ ಆಯ್ಕೆ ಯಾರಾಗಿರಬೇಕು? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಲೆಕ್ಕಾಚಾರ ಸರಿಯಿದೆಯೇ?

ಬಂಟ್ವಾಳದಲ್ಲಿ ಮುಸ್ಲಿಮರು ಒಗ್ಗಟ್ಟಾಗಿ ಎಸ್‌ಡಿಪಿಐಗೆ ಮತ ಹಾಕಿದರೆ, ಅವರ ಅಭ್ಯರ್ಥಿ ಇಲ್ಯಾಸ್ ತುಂಬೆ ಗೆಲುವು ಸಾಧ್ಯ ಎಂಬ ಅರ್ಥದ ಸ್ಕ್ರೀನ್ ಶಾರ್ಟ್ ಒಂದು ಫೇಸ್ಬುಕ್ ಮತ್ತು ವಾಟ್ಸಪ್ ಅಲ್ಲಿ ಓಡಾಡುತ್ತಿವೆ. ಆದರೆ ಅದು ತಪ್ಪು ಲೆಕ್ಕಾಚಾರವಾಗಿದ್ದು, ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುವ ಸಲುವಾಗಿ ಶೇರ್ ಮಾಡಲಾಗುತ್ತಿದೆ.

ಬಂಟ್ವಾಳದ ಒಟ್ಟು ರಾಜಕೀಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೆಳಗೆ ನೀಡಿದ್ದೇನೆ, ಓದಿ ದಯವಿಟ್ಟು ಇತರರಿಗೂ ಶೇರ್ ಮಾಡಿ.
2019ರ ಅಂಕಿ ಅಂಶಗಳ ಪ್ರಕಾರ ಬಂಟ್ವಾಳ ಕ್ಷೇತ್ರದ ಒಟ್ಟು 2.22 ಲಕ್ಷ ಮತದಾರಿದ್ದಾರೆ. ಇದರಲ್ಲಿ ಮುಸ್ಲಿಂ ಸಮುದಾಯದ ಒಟ್ಟು ಓಟ್‌ 25.6% ಇವೆ. (56,874). ಇದು ಒಬ್ಬ ಎಮ್‌ಎಲ್‌ಎಯನ್ನು ಗೆಲ್ಲಿಸಲು ಸಾಕಾಗುವ ಓಟ್ ಅಲ್ಲ. ಆದರೆ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

2018ರ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತ 82.4%.

ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿ 53.8% ಪಡೆದರೆ, ಕಾಂಗ್ರೆಸ್ ಪಡೆದಿದ್ದು 44.83%, ಇತರೆ ಮತ್ತು ನೋಟಾ ಸೇರಿ 1.59% ಪಡೆದಿದ್ದಾರೆ.

2018ರಲ್ಲಿ ಬಿಜೆಪಿ ಇಲ್ಲಿ 8.7% ಮತಗಳ ಅಂತರದಿಂದ ಇಲ್ಲಿ ಕಾಂಗ್ರೆಸ್ ವಿರುದ್ಧ ಗೆದ್ದುಕೊಂಡಿತ್ತು.
ಎಸ್ಸಿ, ಎಸ್ಟಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಸೇರಿದರೆ ಇಲ್ಲಿ ಆಗೋದು ಹತ್ತಿರ ಹತ್ತಿರ 40%. ಇಲ್ಲಿ ಜಾತ್ಯತೀತ ವ್ಯಕ್ತಿ ಗೆಲ್ಲಬೇಕು ಅಂದ್ರೆ ಇತರ ಸಮುದಾಯದ ಮತಗಳು ಬೇಕೇ ಬೇಕು. 

ಬಂಟ್ವಾಳದಲ್ಲಿ ಮುಸ್ಲಿಮರ ಮತಗಳನ್ನು ಒಡೆದರೆ ಬಿಜೆಪಿಗೆ ಖಂಡಿತಾ ಲಾಭವಾಗಲಿದೆ ಎಂಬುವುದಂತೂ ಖಚಿತ. ಆದ್ದರಿಂದ ಮುಸ್ಲಿಂ ಸಮುದಾಯ ಇಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿದರೆ ಕೋಮುವಾದಿ ಬಿಜೆಪಿ ಸೋಲಲು ಸಹಾಯ ಮಾಡಿದಂತಾಗುತ್ತದೆ.

ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಬಲಪಂಥೀಯ ಪಕ್ಷಗಳ ವಾಟ್ಸಪ್ ಯುನಿವರ್ಸಿಟಿ ಬರಹಗಳನ್ನು ನಂಬದಿರಿ. ಕೆಲವೊಮ್ಮೆ ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸಲು ಬಿಜೆಪಿಯೆ ಅದನ್ನು ಬರೆದಿರಬಹುದು.
ಬಂಟ್ವಾಳದಲ್ಲಿ ಮುಸ್ಲಿಮರ ಆಯ್ಕೆ ಜಾತ್ಯತೀತ ಪಕ್ಷದ ಅಭ್ಯರ್ಥಿ ಆಗಿರಬೇಕೇ ಹೊರತು, ಸಮುದಾಯದ ಹೆಸರು ಹೇಳಿ ಮತ ಕೇಳುವ ಬಲಪಂಥೀಯ ಪಕ್ಷಗಳಲ್ಲ.

ಹಾಗೆ ನೋಡಿದರೆ ಪುತ್ತೂರಿನಲ್ಲಿ ಕೂಡಾ 22% ಓಟ್ ಮುಸ್ಲಿಂ ಸಮುದಾಯದ್ದಿವೆ. ಅಲ್ಲಿ ಕೂಡಾ ಮುಸ್ಲಿಮರು ಗೆಲ್ಲಲು ಬೇಕಾಗುವ ದೊಡ್ಡ ಸಮುದಾಯವೇ ಆಗಿದೆ. ಆದರೆ ಅವರೊಬ್ಬರಿಂದಲೆ ಗೆಲುವು ಸಾಧ್ಯವಾಗುವುದಿಲ್ಲ.

Comments