ಗುಜರಾತ್ ಮೂಲದ 'ಅಮೂಲ್' ಬೆಂಗಳೂರಿಗೆ ಬರುತ್ತಿದೆ | 'ನಂದಿನಿ'ಗೆ ಇದು ಸರಳ ವಿಷಯವೇ?

ಗುರುವಾರದಿಂದ ಬೆಂಗಳೂರಿಗೆ ಗುಜರಾತ್ ಮೂಲದ 'ಅಮೂಲ್' ಹಾಲು ಮತ್ತು ಮೊಸರು ಕಾಲಿಡುತ್ತಿದೆ.‌ ಇದರ ವಿರುದ್ಧ ಈಗಾಗಲೇ ಹಲವಾರು ಪ್ರಜ್ಞಾವಂತರು ಧ್ವನಿ ಎತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಮೂಲ್ ಹಾಲು ಗುಜರಾತಿಗೆ ಸಾಕಾಗುತ್ತಿಲ್ಲ, ಕರ್ನಾಟಕಕ್ಕೆ ಹೇಗೆ ಕೊಡಲು ಸಾಧ್ಯ ಎಂದು ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ಗುಜರಾತಿ ವ್ಯಾಪಾರಗಳನ್ನು ಗಮನಿಸುತ್ತಾ ಬಂದರೆ, ಇದು ಅಸಾಧ್ಯವೇನಲ್ಲ ಎಂದು ನಿಮಗ ಮನವರಿಕೆ ಆಗುತ್ತದೆ.
ಯಾವುದೇ ಉಪಕರಣಗಳು ಇಲ್ಲದೆ, ಬಿಎಸ್‌ಎನ್ಎಲ್ ಬಳಸಿಕೊಂಡು ಗುಜರಾತ್ ಮೂಲದ ಉದ್ಯಮಿ ಮುಖೇಶ್ ಅಂಬಾನಿ ಜಿಯೋ ಕಂಪನಿಯನ್ನು ಹೇಗೆ ಬೆಳೆಸಿದರೋ, ಹಾಗೆಯೇ ನಂದಿನಿಯಿಂದಲೇ ಹಾಲು ಖರೀದಿ ಮಾಡಿ ಅದಕ್ಕೆ ಅಮೂಲ್ ಸ್ಟಿಕ್ಕರ್ ಹಚ್ಚಿ ಮಾರಾಟ ಮಾಡುವುದಕ್ಕೆ ಎಷ್ಟು ಹೊತ್ತು ಬೇಕು?

ಅಥವಾ ನಂದಿನಿಗೆ ಹಾಲು ನೀಡುತ್ತಿದ್ದ ನಮ್ಮ ರೈತರಿಂದಲೇ ಹಾಲು ಖರೀದಿ ಮಾಡಿ ಅದಕ್ಕೆ ಅಮೂಲ್ ಸ್ಟಿಕ್ಕರ್ ಅಂಟಿಸಿ ಮಾರುತ್ತಾರೆ. ಇಲ್ಲಿ ಗಟ್ಟಿಯಾಗಿ ತಳವೂರಿದ ನಂತರ ನಂದಿನಿಯೂ ಬೇಡ, ರಾಜ್ಯದ ರೈತರೂ ಬೇಡ‌ವಾಗಿ, ಗುಜರಾತಿನಿಂದಲೇ ಹಾಲು ತರುತ್ತೇವೆ ಎನ್ನುತ್ತಾರೆ. ನೋಡುತ್ತಿರಿ ಬೇಕಾದರೆ.‌

ನಂದಿನಿಗೆ ಈಗ‌ ರೈತರು ಹಾಕುವ ಹಾಲು ಸಾಕಾಗುತ್ತಿಲ್ಲ, ಇನ್ನು ಅಮೂಲ್‌ಗೆ ಹೇಗೆ ಹಾಲು ಮಾರುತ್ತಾರೆ ಎಂದು ನೀವು ಚಿಂತಿಸುತ್ತಿದ್ದರೆ, ಅದು ಕೂಡಾ ತಪ್ಪು. 
ಬಿಜೆಪಿ ಇದ್ದರೆ ಇವೆಲ್ಲವೂ ಸಾಧ್ಯ. ಕೇಂದ್ರದಿಂದ ಒಂದು ಹುಕುಂ ಬಂದರೆ ಸಾಕು, ಅದನ್ನು ಚಾಚು ತಪ್ಪದೆ ನಡೆಸಿಕೊಡುತ್ತೇವೆ ಎಂಬ ಮನಸ್ಥಿತಿಯಲ್ಲಿ ನಮ್ಮ ರಾಜ್ಯದ 25 ಬಿಜೆಪಿ ಸಂಸದರು ಇದ್ದಾರೆ. ಇಲ್ಲಿನ ಯಾವುದೇ ಬಿಜೆಪಿ ಸಂಸದ ಕೂಡಾ ಅದಕ್ಕೆ ವಿರೋಧ ವ್ಯಕ್ತಪಡಿಸದೆ ನಡು ಬಗ್ಗಿಸುತ್ತಾರೆ. 

ಇಂತಹ ಸಂಸದರು ಇರಬೇಕಾದರೆ ಅಮೂಲ್ ಇಲ್ಲಿ ಪವಾಡ ಮಾಡುವುದರಲ್ಲಿ ಯಾವ ಅನುಮಾನವೂ ಬೇಡ.
ಹಾಗಾಗಿ ಯಾವ ಡೌಟೂ ಬೇಡಾ, ಗುಜರಾತ್ ಮೂಲದ ಅಮೂಲ್ ನಮ್ಮ ರಾಜ್ಯಕ್ಕೆ ಬರುತ್ತಿರುವುದು, ನಂದಿನಿಯನ್ನು ಮುಗಿಸಲು, ಮುಗಿಸಲು, ಮುಗಿಸಲು.

ಅಷ್ಟೇ.

Comments