ಮಂಗಳೂರು ಮುಸ್ಲಿಮರು ಕನ್ನಡ ಮಾತಾಡುತ್ತಾರೆ, ಬರೆಯುತ್ತಾರೆ ಹಾಗೂ ಓದುತ್ತಾರೆ ಎಂದು ಹಲವಾರು ಕನ್ನಡಿಗರು ಹೆಮ್ಮೆ ಹಾಗೂ ಸಂಭ್ರಮಪಟ್ಟುಕೊಳ್ಳುತ್ತಾರೆ.
ಆದರೆ ಈ ಎಲ್ಲಾ ಸಂಭ್ರಮ ಮುಂದಿನ ಒಂದೆರೆಡು ತಲೆಮಾರಿಗೆ ಕೊನೆಯಾಗುತ್ತದೆ.
ಈಗಿನ ಪರಿಸ್ಥಿತಿಯ ಬಗ್ಗೆ ಹೇಳಬೇಕಾದರೆ, ಮಂಗಳೂರು ಮುಸ್ಲಿಂ ಕುಟುಂಬಗಳ ಹೆಚ್ಚಿನ ಮಕ್ಕಳು ಈಗಾಗಲೆ ಇಂಗ್ಲಿಷ್ ಶಾಲೆಗಳ ಮೂಲಕ ಇಂಗ್ಲಿಷ್ ಅನ್ನು ಕಲಿಯುತ್ತಿದ್ದಾರೆ. ಇನ್ನುಳಿದವರು ಮುಂದಿನ ದಿನಗಳಲ್ಲಿ ಕನ್ನಡದ ಬದಲಿಗೆ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಲಿದ್ದಾರೆ.
ದಿನಗೂಲಿ ಮಾಡಿ ಬದುಕುವ ಮಂಗಳೂರಿನ ಬಡ ಮುಸ್ಲಿಮರು ಕೂಡಾ ಕನ್ನಡ ಭಾಷೆಯನ್ನು ತಮ್ಮ ಮಕ್ಕಳಿಗೆ ಇಷ್ಟಪಟ್ಟು ಆಯ್ಕೆ ಮಾಡುತ್ತಿಲ್ಲ. ಒಂದು ವೇಳೆ ಅವರು ಆಯ್ಕೆ ಮಾಡಿದ್ದೆ ಆದರೆ ತೀರಾ ಅನಿವಾರ್ಯ ಕಾರಣಕ್ಕಾಗಿ ಮಾಡಿರುತ್ತಾರೆ.
ಅಷ್ಟಕ್ಕೂ ಮಂಗಳೂರು ಮುಸ್ಲಿಮರಿಗೆ ಕನ್ನಡದ ಅಗತ್ಯವಾದರೂ ಏನಿದೆ. ನನಗೆ ಕನ್ನಡ ಅನ್ನದ ಮತ್ತು ಅರಿವಿನ ಭಾಷೆ. ಹಾಗಾಗಿ ನಾನು ಇನ್ನೂ ಅದನ್ನು ಬಳಸುತ್ತೇನೆ. ಆದರೆ ನಮ್ಮ ಮುಂದಿನ ತಲೆಮಾರಿಗೆ ಕನ್ನಡದ ಅಗತ್ಯವಿದೆ ಎಂದು ನನಗೆ ಅನಿಸುತ್ತಿಲ್ಲ.
ಮುಂದಿನ ತಲೆಮಾರಿಗೆ ಆಡಳಿತದ ಭಾಷೆ, ಅನ್ನದ ಭಾಷೆಯಾಗಿ ಇಂಗ್ಲಿಷ್ ಇರಲಿದೆ. ಜನರ ಜೊತೆಗೆ ಬೆರೆಯಲು ತುಳು, ಬ್ಯಾರಿ, ಕೊಂಕಣಿ ಮಂಗಳೂರು ಮುಸ್ಲಿಮರಿಗೆ ಸಾಕಾಗುತ್ತದೆ. ಹಾಗಾಗಿ ಕನ್ನಡ ಎಂಬ ಭಾಷೆ ನಮ್ಮ ಮುಂದಿನ ತಲೆಮಾರಿಗೆ ಅಗತ್ಯವಿಲ್ಲದ ಒಂದು ಭಾಷೆಯಾಗಿ ಇರಲಿದೆ.
ಮಂಗಳೂರು ಮುಸ್ಲಿಮರು ಕನ್ನಡ ಮಾತಾಡುತ್ತಾರೆ ಎಂದ ಮಾತ್ರಕ್ಕೆ ಅದು ಭಾಷೆಯ ಮೇಲಿನ ಪ್ರೀತಿಗಾಗಿ ಅಲ್ಲ. ಬದಲಾಗಿ, ಬೇರೆ ಆಯ್ಕೆ ಇಲ್ಲದೆ, ಅನಿವಾರ್ಯ ಕಾರಣಕ್ಕಾಗಿ ಕನ್ನಡ ಕಲಿತ ಕಾರಣಕ್ಕೆ.
(ಕನ್ನಡದ ಮೇಲೆ ಪ್ರೀತಿ ಇರುವ ನನ್ನಂತರವರು ಇಲ್ಲ ಎಂದೇನಿಲ್ಲ)
ಅಷ್ಟೇ.
#ಕನ್ನಡ #Kannada #Byari #ಬ್ಯಾರಿ #ಮನೆಭಾಷೆ #Mothertongue
ಬದಲಾವಣೆ ಸಾದ್ಯವೇ, ಅದರ ಅವಶ್ಯಕತೆ ಇದೆಯೇ ಎಂಬುದು ನಮ್ಮ ಮುಂದಿನ ಚರ್ಚೆ
ReplyDelete