'ಕತೆಮುಗಿದ ನಂತರವೂ ಮುಂದುವರೆಯುವ ಕತೆಗಳು' | ತಾಜ್‌ಮಹಲ್ಲಿನ ಖೈದಿಗಳು

ಎಷ್ಟೋ ಸಮಯದ ನಂತರ ಒಂದು ಪುಸ್ತಕವನ್ನು ಪೂರ್ತಿಯಾಗಿ ಓದಿದೆ. ಆದರೆ ಈ ಬಾರಿ ಹೊಸ ಪ್ರಯೋಗ ಮಾಡಿದೆ. ಮುನ್ನುಡಿ, ಬೆನ್ನುಡಿ, ಲೇಖಕರ ಹಾಗೂ ಪ್ರಕಾಶಕರ ಮಾತನ್ನು ಪುಸ್ತಕ ಪೂರ್ತಿ ಓದಿದ ನಂತರವೇ ಓದಿದೆ. 

ಓದಿಗಿಂತ ಮುಂಚೆ ಯಾವುದೇ ಪೂರ್ವಗ್ರಹ ಬರದಿರಲು ಬೇಕಾಗಿ ಹಾಗೆ ಮಾಡಿದೆ.

ಗೆಳೆಯ ಸುನೈಫ್ ತುಂಬಾ ಚೆಂದವಾಗಿ ಅನುವಾದ ಮಾಡಿದ್ದಾರೆ. ಹಲವು ಕತೆಗಳಲ್ಲಿ ಕರಾವಳಿಯ ತುಳು ಅಥವಾ ಬ್ಯಾರಿ ಸಂಸ್ಕೃತಿಯ ಪಾತ್ರಗಳು ನಮ್ಮ ಜೊತೆ ಮಾತಾನಾಡುತ್ತಿರುವಂತೆ ಅನಿಸುತ್ತವೆ.

ಮೊದಲ ಮೂರು ಕತೆಗಳು ನನಗೆ ಅರ್ಥ ಆಗದೆ ಚೂರು ಅಸಹನೆ ಉಂಟು ಮಾಡಿತ್ತಾದರೂ, ನಂತರ ಪುಸ್ತಕ ಓದಿಸಿಕೊಂಡು ಹೋಯಿತು. 

ಕತೆ ಓದಿದ ನಂತರವೂ ಆ ಕತೆಗಳು ಮುಂದುವರೆಯುತ್ತಲೆ ಇರುವಂತೆ ಕತೆಗಾರ ಕತೆಗಳನ್ನು ಹೆಣೆದಿದ್ದಾರೆ ಅನಿಸಿತು.

ಮೊದಲಿಗೆ ಹೇಳಿದಂತೆ, ತುಂಬಾ ಸಮಯದ ನಂತರ ಪೂರ್ತಿ ಪುಸ್ತಕವನ್ನು ಓದಿಸಿದ ಎಲ್ಲರಿಗೂ ಥ್ಯಾಂಕ್ಯೂ.

SBI 

Comments