ನಮ್ಮ ಯುವಕರು ದುಡಿಯುವುದು ಸಾಲುವುದಿಲ್ಲಂತೆ ಇನ್ಫೋಸಿಸ್ ಓನರ್‌ಗೆ!

ಚೀನಾದಂತಹ ಮುಂದುವರಿದ ದೇಶಗಳೊಂದಿಗೆ ಭಾರತ ಸ್ಪರ್ಧಿಸಬೇಕು ಎಂದರೆ ದೇಶದ ಯುವಕರು ವಾರದಲ್ಲಿ 70 ಗಂಟೆಗಳ ಕಾಲ ದುಡಿಯಬೇಕು ಎಂದು ಇನ್ಫೋಸಿಸ್ ಮಾಲಿಕ ನಾರಾಯಣ ಮೂರ್ತಿ ಹೇಳಿದ್ದಾರೆ. ಅವರ ಹೇಳಿಕೆಗೆ ನಮ್ಮ ದೇಶದ ಉದ್ಯಮಿಗಳು ಸಹಮತವೂ ವ್ಯಕ್ತಪಡಿಸಿದ್ದಾರೆ.

ಆಲೋಚಿಸಿ ಸ್ನೇಹಿತರೆ, ಎಷ್ಟೊಂದು ಅಮಾನವೀಯ ಜನಗಳು. ಇವರೆಲ್ಲಾ ತಮ್ಮ ಲಾಭಕ್ಕಾಗಿ ದೇಶದ ಹೆಸರನ್ನು ಬಳಸುತ್ತಿದ್ದಾರೆ. ಯುವಕರು ವಾರಕ್ಕೆ 70 ಗಂಟೆಗಳ‌ ಕಾಲ ದುಡಿದರೆ ಇವರ ಕಿಸೆ ಗಟ್ಟಿ ಆಗುತ್ತೆ ವಿನಃ ಜನರದ್ದಲ್ಲ.

ಮುಂದುವರಿದ ದೇಶಗಳೊಂದಿಗೆ ಸ್ಪರ್ಧೆ ಬಯಸುವ ಇವರು, ತಮ್ಮ ಕಂಪೆನಿಗಳಲ್ಲಿ ದುಡಿಯುವ ಉದ್ಯೋಗಿಗಳಿಗೆ ಮುಂದುವರಿದ ದೇಶ ನೀಡುವ ವೇತನ, ಸೌಲಭ್ಯಗಳನ್ನು ನೀಡುತ್ತಿದ್ದಾರೆಯೆ? ಇವರು ನಮ್ಮ ಯುವಕರನ್ನು ಪ್ರಾಣಿಗಳ ರೀತಿಯಲ್ಲಿ ತಾನೆ ದುಡಿಸುತ್ತಿರುವುದು. ಅದನ್ನು ಮುಚ್ಚಿಕೊಳ್ಳಲು ದೇಶದ ಹೆಸರು ಮುನ್ನೆಲೆಗೆ ತರುತ್ತಾರೆ.

ಅಮೆರಿಕದಂತಹ ದೇಶದಲ್ಲಿ ಒಂದು ಗಂಟೆಗೆ $7.5 ಅಂದರೆ ಸುಮಾರು 600 ರೂ. ವೇತನ ಸಿಗುತ್ತದೆ.‌ ಅಲ್ಲಿನ ಕಾರ್ಮಿಕರು ಕನಿಷ್ಠ ಹದಿನೈದು ಡಾಲರ್ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅದೇ, ಕೆನಡಾ ದೇಶ ಗಂಟೆಗೆ 20 ರಿಂದ 40 ಡಾಲರ್ ನೀಡುತ್ತಿದೆ. 

ಇವರು ಹೇಳುವ, ವಾರಕ್ಕೆ 70 ಗಂಟೆಗಳೆಂದರೆ 6 ದಿನಗಳ ಕೆಲಸದಲ್ಲಿ ಪ್ರತಿದಿನ 11 ಗಂಟೆ 40 ನಿಮಿಷ ಯುವಕರು ಕೆಲಸ ಮಾಡಬೇಕು. ಕೆಲಸದ ಅವಧಿ ಹಾಗೂ ಪ್ರಯಾಣದ ಅವಧಿ ಸೇರಿದರೆ ಸುಮಾರು 13.5 ರಿಂದ 14 ಗಂಟೆಗಳವರೆಗೆ ಆಗುತ್ತದೆ. ಯುವಕರಿಗೆ ವರ್ಕ್ ಲೈಫ್ ಬ್ಯಾಲೆನ್ಸ್ ಎಂಬುದು ಹೇಗೆ ಸಾಧ್ಯ.

ಸಧ್ಯಕ್ಕೆ ದೇಶದಲ್ಲಿ ಎಂಟು ಗಂಟೆಯ ದುಡಿಮೆಯ ಕಾನೂನು ಇವೆ(ಅದನ್ನೂ ಬದಲಾಯಿಸಲಾಗಿದೆ). ಈ ಎಂಟು ಗಂಟೆಯ ದುಡಿಮೆ ಅನ್ನುವುದು ತಂತ್ರಜ್ಞಾನ ಇಲ್ಲದೆ ನಿಧಾನವಾಗಿ ಕೆಲಸ ಆಗುತ್ತಿದ್ದ ಕಾಲದಲ್ಲಿ ತಂದ ಕಾನೂನಾಗಿದೆ. ಈಗಿನ ತಂತ್ರಜ್ಞಾನ ಹಾಗೂ ಕೆಲಸದ ವೇಗದ ಮಟ್ಟಿಗೆ ಹೇಳುವುದಾದರೆ, ದಿನಕ್ಕೆ ಅಂದಾಜು ಮೂರು ಗಂಟೆಗಳ ಕಾಲವಷ್ಟೆ ದುಡಿದರೆ ಸಾಕಾಗುತ್ತದೆ.‌

ಉಳಿದ ಐದು ಗಂಟೆ ದುಡಿಮೆ ಎನ್ನುವುದು ಹೆಚ್ಚುವರಿ ದುಡಿಮೆಯಾಗಿದೆ. ಅದು ಬಂಡವಾಳಶಾಹಿ ವ್ಯವಸ್ಥೆಯ ಕಿಸೆಗೆ ಹೋಗುವ ದುಡಿಯುವ ವರ್ಗದ ರಕ್ತ. ಅದರ ವೇತನವನ್ನೇ ಈ ಬಂಡವಾಳಶಾಹಿ ವ್ಯವಸ್ಥೆ ನಮ್ಮ ಕಾರ್ಮಿಕರಿಗೆ ನೀಡದೆ ಮೋಸ ಮಾಡುತ್ತಿದೆ.

ಇಷ್ಟಕ್ಕೆ ಸಾಲದೆ, ಕಮ್ಮಿ ಸಂಬಳಕ್ಕೆ, ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ಇಲ್ಲಿನ ಮನುಷ್ಯರನ್ನು ಪ್ರಾಣಿಗಳ ತರ ದುಡಿಸುವ ಈ ಇನ್ಫೋಸಿಸ್ ಓನರ್‌ಗೆ ಮತ್ತೆ ಹೆಚ್ಚಿನ ದುಡಿಮೆ ಬೇಕಂತೆ 😡

Comments