ತನ್ನ ಪತ್ನಿ ಗ್ಲ್ಯಾಡಿಸ್ ಎಂಬ ಜೊತೆ ಸೇರಿ ಒರಿಸ್ಸಾದ ಕುಷ್ಠರೋಗಿಗಳ ಸೇವೆ ಮಾಡಿದರು. ಇವರಿಗೆ ಎಸ್ತೇರ್ ಎಂಬ ಮಗಳು, ತಿಮೋಥಿ ಮತ್ತು ಫಿಲಿಪ್ ಎಂಬ ಗಂಡು ಮಕ್ಕಳಿದ್ದರು.
ಆದರೆ ಇವರು ಮತಾಂತರ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿ ಗ್ರಹನ್ ಮತ್ತು 10 ಮತ್ತು 6 ವರ್ಷಗಳ ಇಬ್ಬರು ಗಂಡು ಮಕ್ಕಳನ್ನು ಮಹೀಂದ್ರ ಜೀಪಿನಲ್ಲಿ ಮಲಗಿದ್ದಾಗ ಸಜೀವ ದಹನ ಮಾಡಲಾಯಿತು. ಈ ಕೃತ್ಯ ಎಸಗಿದವರು ಬಜರಂಗಜಳ ಎಂಬ ಬಿಜೆಪಿ ಪರ ಸಂಘಟನೆಯ ದುಷ್ಕರ್ಮಿಗಳು.
ಕೃತ್ಯ ಎಸಗಿದವರು ಬಿಜೆಪಿಯ ಸಹಸಂಘಟನೆಯಾದ ಬಜರಂಗದ ಕಾರ್ಯಕರ್ತರಾದ ದಾರಾ ಸಿಂಗ್ ಮತ್ತು ಇತರರು. ದುಷ್ಕರ್ಮಿಗಳು ಜೀಪಿಗೆ ಬೆಂಕಿ ಹಚ್ಚಿದಾಗ ಗ್ರಹನ್ ಮತ್ತು ಅವರ ಮಕ್ಕಳು ಎಚ್ಚರಗೊಂಡು ಹೊರಬರಲು ಪ್ರಯತ್ನಿಸಿದರೂ ದಾರಾ ಸಿಂಗ್‌ನ ತಂಡ ಅವರನ್ನು ಲಾಠಿ ಬಳಸಿ ಅವರನ್ನು ಮತ್ತೆ ಬೆಂಕಿಗೆ ತಳ್ಳಿದ್ದರು.
ತನ್ನ ಕುಟುಂಬದ ಮೇಲೆ ಅನ್ಯಾಯ ನಡೆದರೂ ಗ್ರಹನ್ ಅವರ ಪತ್ನಿ ಗ್ಲ್ಯಾಡಿಸ್ ಅವರು, "ನನ್ನ ಗಂಡ ಮತ್ತು ನನ್ನ ಇಬ್ಬರು ಮಕ್ಕಳನ್ನು ಕೊಂದವರನ್ನು ನಾನು ಕ್ಷಮಿಸುತ್ತೇನೆ" ಎಂದು ಹೇಳಿದರು.
ತನ್ನ ಪ್ರೀತಿಯ ಗಂಡ ಮತ್ತು ಇಬ್ಬರು ಕಂದಮ್ಮಗಳನ್ನು ಕೊಂದ ಆರೋಪಿಗಳನ್ನು ಕ್ಷಮಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ ಗ್ಲ್ಯಾಡ್ಲಿಸ್ ಧರ್ಮ ಅಂದರೆ ಏನು ಎಂದು ತೋರಿಸಿಕೊಟ್ಟರು. ಆದರೆ ಅಪರಾಧಿಗಳಿಗೆ ಕ್ಷಮೆ ನೀಡುವ ಕಾನೂನು ಭಾರತದಲ್ಲಿ ಇಲ್ಲ.
ಈ ಘಟನೆ ನಡೆದಿದ್ದು 1999 ಜನವರಿ 21-22 ರಾತ್ರಿ ವೇಳೆ. ಘಟನೆ ನಡೆದು ಇಂದಿಗೆ 25 ವರ್ಷವಾಯಿತು. ಇಂದು ಮತ್ತೊಂದು ಅನ್ಯಾಯ ಮತ್ತು ದ್ವೇಷದ ಮತ್ತೊಂದು ಅಧ್ಯಾಯದ ಮತ್ತೊಂದು ಹಾದಿಗೆ ದೇಶ ಚಲಿಸುತ್ತಿದೆ.
ಮುಂದಿನ ತಲೆಮಾರು ನಮ್ಮನೆ ಕೀಳಾಗಿ ನೋಡದೆ ಇರಲು ಮತ್ತು ದೂಷಿಸದೆ ಇರಲು ಇದರ ವಿರುದ್ಧ ನಾವು ಇದ್ದೆವು ಎಂದು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಹೇಳೋಣ. ಈ ಮೂಲಕ ಇತಿಹಾಸದ ಕಸದ ಬುಟ್ಟಿಗೆ ಸೇರುವುದರಿಂದ ತಪ್ಪಿಸಿಕೊಳ್ಳೋಣ.
Comments
Post a Comment