ಪ್ಯಾಲೆಸ್ತೀನಿ ಮಕ್ಕಳು, ಮಹಿಳೆಯರು ಮತ್ತು ಅಮಾಯಕರ ಮೇಲೆ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವನ್ನು ಜಗತ್ತಿನ ಮುಂದೆ ಬಿಚ್ಚಿಡುತ್ತಿರುವ ಪತ್ರಕರ್ತರಲ್ಲಿ ಇವರೂ ಒಬ್ಬರು. ಅಲ್ ಜಝೀರಾದ ಗಾಜಾ ಬ್ಯೂರೋದ ಮುಖ್ಯಸ್ಥರು.
ಇವರ ಬಗ್ಗೆ ಇಸ್ರೇಲ್ ಎಷ್ಟೊಂದು ತಲೆಬಿಸಿ ಮಾಡಿಕೊಂಡಿದೆ ಎಂದರೆ, ಅತ್ಯಂತ ಸುರಕ್ಷಿತ ತಾಣದಲ್ಲಿ ಇದ್ದ ಇವರ ಪತ್ನಿ, 16 ವರ್ಷದ ಮಗ, 7 ವರ್ಷದ ಮಗಳು ಮತ್ತು ಮೊಮ್ಮಗನನ್ನು ಗುರಿ ಮಾಡಿ ಕೊಂದಿತ್ತು. ಇದು ನಡೆದಿದ್ದು ಅಕ್ಟೋಬರ್‌ನಲ್ಲಿ.
ಅದಾದ ನಂತರ ಇವರು ವರದಿ ಮಾಡುತ್ತಿದ್ದ ಸ್ಥಳಕ್ಕೆ ಗುರಿ ಮಾಡಿ ಮತ್ತೆ ಇಸ್ರೇಲ್ ದಾಳಿ ಮಾಡಿತ್ತು. ಆ ವೇಳೆ ಅವರ ಜೊತೆಗೆ ಇದ್ದ ಪತ್ರಕರ್ತರೊಬ್ಬರು ತೀವ್ರ ಗಾಯಗೊಂಡಿದ್ದರು. ಆದರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಕೂಡಾ ಇಸ್ರೇಲ್‌ನ ಸೇನೆ ಅವಕಾಶ ನೀಡದ ಕಾರಣ ಅವರು ಅಸುನೀಗಿದರು. ವಾಯಿಲ್ ಹಮ್ದನ್ ಅವರು ಹೇಗೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು.
ಅದರ ನಂತರ ಈ ತಿಂಗಳ ಆರಂಭದಲ್ಲಿ 27 ವರ್ಷದ ಅವರ ಮಗ ಹಮ್ಜಾ ಅವರನ್ನು ಇಸ್ರೇಲ್ ದಾಳಿ ಮಾಡಿ ಕೊಂದಿತು. ಅದಾಗ್ಯೂ ಹಮ್ದನ್ ಅವರು ತಮ್ಮ ಕೆಲಸವನ್ನು ಮುಂದುವರೆಸಿದ್ದರು.
ಈ ಹಿಂದೆ ಇಸ್ರೇಲ್ ಅವರ ಮೇಲೆ ದಾಳಿ ಮಾಡಿದಾಗ ಉಂಟಾದ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ತಾನು ಕತಾರ್‌ಗೆ ಪ್ರಯಾಣಿಸಲು ಅವರು ಇದೀಗ ರಫಾ ಗಡಿ ಮೂಲಕ ಈಜಿಪ್ಟ್ ತಲುಪಿದ್ದಾರೆ.
ಅವರ ಮಾತು ಕೇಳಿ, ನಾನು ನನ್ನ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಅವರು ಮತ್ತೆ ಹೇಳುತ್ತಿದ್ದಾರೆ. ಇಷ್ಟೊಂದು ಈಮಾನ್ ಹೇಗೆ ಸಾಧ್ಯ ಎಂದು ನಾನು ಪ್ರತಿಬಾರಿ ಯೋಚಿಸುತ್ತೇನೆ. ಅಲ್ಲಾಹ್ ಅವರನ್ನು ಕಾಪಾಡಲಿ. ನಮ್ಮಿಂದ ಸಾಧ್ಯ ಇರೋದು ದುಆ ಅಷ್ಟೇ ಅಲ್ಲವೇ.
Comments
Post a Comment