ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ವರನಿಲ್ಲದೆ ಯುವತಿಯರು ಮದುವೆ ಆಗಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಹೀಗೊಂದು ಬೃಹತ್ ವಂಚನೆ ನಡೆದಿದೆ.
ಇದು ನಡೆದಿದ್ದು ಜನವರಿ 25 ರಂದು ಯುಪಿಯ ಬಲ್ಲಿಯ ಜಿಲ್ಲೆಯಲ್ಲಿ. ಅಂದು ಬಿಜೆಪಿಯ ಆದಿತ್ಯನಾಥ್ ಸರ್ಕಾರದ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ 568 ಜೋಡಿಗಳು ವಿವಾಹವಾಗಿದ್ದರು.
ಆದರೆ ಹೆಚ್ಚಿನ ವಧುಗಳಿಗೆ ವರನೇ ಇರಲಿಲ್ಲ. ಅವರೆಲ್ಲರೂ ತಮಗೆ ತಾವೇ ಹಾರ ಹಾಕಿಕೊಂಡಿದ್ದಾರೆ. ಮತ್ತೆ ಹಲವರು ಹಲವು ವರ್ಷಗಳ ಹಿಂದೆ ಮದುವೆ ಆದವರು. ಗುಂಪಿನಲ್ಲಿ ಅನೇಕರು ಸಹೋದರ ಸಹೋದರಿಯರು. ಮತ್ತೆ ಕೆಲವರು ಅಪ್ರಾಪ್ತ ವಯಸ್ಕರು ಇದ್ದರು ಎಂದು ವರದಿ ಆಗಿದೆ.
ಇದೆಲ್ಲ ನಡೆದಿರುವುದು ಕೇವಲ ದಂಪತಿಗಳಂತೆ ಪೋಸ್ ಕೊಡಲು ಮತ್ತು ಛಾಯಾಚಿತ್ರ ತೆಗೆಯಲು ಮತ್ತು ಸರ್ಕಾರದ ಹಣವನ್ನು ಹಂಚಿಕೊಳ್ಳಲು. ಯುಪಿ ಸರ್ಕಾರದ ಸರ್ಕಾರಿ ಕಾರ್ಯಕ್ರಮದ ಅವ್ಯವಸ್ಥೆ ಇದು.
ಅಷ್ಟಕ್ಕೂ ಈ ಯೋಜನೆ ಮೂಲಕ ಸರ್ಕಾರ ಬಡ ಹುಡುಗಿಯರ ಮದುವೆಗೆ ನೀಡುತ್ತಾ ಇರುವುದು ಕೇವಲ 51 ಸಾವಿರ. (ದಂಪತಿಗೆ ಉಡುಗೊರೆ ನೀಡಲು 10 ಸಾವಿರ, ಅತಿಥಿಗಳ ಆಹಾರ ಮತ್ತು ಪಾನೀಯಗಳಿಗೆ 6 ಸಾವಿರ ಮತ್ತು ಹುಡುಗಿಯ ಖಾತೆಗೆ 35 ಸಾವಿರ, ಒಟ್ಟು 51 ಸಾವಿರ)
ಈ ವಿಡಿಯೋ ವೈರಲ್ ಆದ ನಂತರ ಎಡಿಒ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖಾ ಸಮಿತಿ ರಚಿಸಲಾಗಿದೆ. ರಾಜ್ಯದ ಅನೇಕ ಕಡೆ ಇಂತಹ ಘಟನೆ ನಡೆದಿದೆ ಎಂದು ವರದಿ ಆಗಿವೆ ಎಂದು ಹೇಳಲಾಗಿದೆ.
ಜನವರಿ 17ರಂದು ನಡೆದ ಇಂತಹದ್ದೇ ಸಾಮೂಹಿಕ ವಿವಾಹದಲ್ಲಿ ನೀಡುವ ಉಡುಗೊರೆಯಲ್ಲಿ ಗೋಲ್‌ಮಾಲ್ ಆಗಿದ್ದು ವರದಿ ಆಗಿತ್ತು.
ಇಷ್ಟೊಂದು ಸಣ್ಣ ಯೋಜನೆಯನ್ನೆ ಸರಿಯಾಗಿ ಜಾರಿ ಮಾಡಲು ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಇಲ್ಲಿನ ಭಕ್ತರು ಇಲ್ಲಿ ಕೂಡಾ ಯೋಗಿ ರೀತಿ ಸರ್ಕಾರ ಬೇಕು ಎಂದು ಹೇಳ್ತಾ ಇದ್ದಾರೆ. ಇವರನ್ನೆಲ್ಲ ಸಾಲಾಗಿ ನಿಲ್ಲಿಸಿ ಬಸ್ ಹತ್ತಿಸಿ ಅಲ್ಲಿಗೆ ಕಳುಹಿಸಬೇಕು.
ಯೋಚಿಸಿ, 51 ಸಾವಿರ ಪಡೆಯುವುದಕ್ಕಾಗಿ ಹೆತ್ತವರು ಮಕ್ಕಳನ್ನು ಹಾಡಹಗಲೇ ಇಂತಹ ಕಾರ್ಯಗಳಿಗೆ ಕಳುಹಿಸುತ್ತಾರೆ ಎಂದರೆ ಅಲ್ಲಿನ ಬಡತನ ಎಂತಹದ್ದಿರಬಹುದು? ಮುಂದೆ ಚುನಾವಣೆ ಇದೆ. ಎಚ್ಚರಿಕೆಯಿಂದ ಮತ ಚಲಾವಣೆ ಮಾಡಿ. ಇಲ್ಲವೆಂದರೆ ನಮ್ಮನ್ನೂ ಯುಪಿ ಲೆವಲ್‌ಗೆ ಇಳಿಸುತ್ತಾರೆ. ಅಷ್ಟೇ ✊🏿
ವಿಡಿಯೊ ನೋಡಿ 👇🏿
Comments
Post a Comment