ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶದ ಬಿಜ್ನೋರ್‌ನ ಕೋಚಿಂಗ್ ಸೆಂಟರ್‌ನಲ್ಲಿ 28 ವರ್ಷದ ಕಂಪ್ಯೂಟರ್ ಶಿಕ್ಷಕಿಯನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಹತ್ಯೆಯ ಆರೋಪಿ ಶಿಕ್ಷಕಿಯ ಮಾಜಿ ವಿದ್ಯಾರ್ಥಿ. ಆತ ಶಿಕ್ಷಕಿಯೊಂದಿಗೆ ಪ್ರೇಮ ನಿವೇದನೆ ಮಾಡಿದ್ದ. ಆದರೆ ಶಿಕ್ಷಕಿ ಅದನ್ನು ನಿರಾಕರಿಸಿದ್ದರು. ಹೀಗಾಗಿ ಇತರ ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕರಿಗೆ ಆರೋಪಿ ಗುಂಡಿಕ್ಕಿದ್ದಾನೆ.
ಗುಂಡೇಟಿಗೆ ಸಿಕ್ಕ ಶಿಕ್ಷಕಿಯನ್ನು ಮೀರತ್‌ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗಿನ ವರದಿಯ ಪ್ರಕಾರ ಶಿಕ್ಷಕಿ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅರೆ, ಈ ಸುದ್ದಿ ನಿಮಗೆ ಇನ್ನೂ ಸಿಕ್ಕಿಲ್ಲವೆ? ಬಿಜೆಪಿ ಪರ ಟಿವಿ ಮಾಧ್ಯಮಗಳಲ್ಲಿ ಬಂದಿಲ್ಲವೇ? ಸ್ತ್ರೀ ರಕ್ಷಕ ಬಿಜೆಪಿ, ಬಜರಂಗದಳ, ಆರೆಸ್ಸೆಸ್, ವಿಹಿಂಪ ಸೇರಿದಂತೆ ಅವರ ಬೆಂಬಲಿಗರು ಟ್ವೀಟ್ ಮಾಡಿಲ್ಲವೇ?
ಕಾರಣ ಇಷ್ಟೇ,
ಪ್ರೇಮ ನಿವೇದನೆ ಮಾಡಿ, ಶಿಕ್ಷಕಿಯನ್ನು ಕೊಂದ ಆರೋಪಿಯ ಹೆಸರು ಪ್ರಶಾಂತ್ ಕುಮಾರ್ ಹಾಗೂ ಸಂತ್ರಸ್ತೆಯ ಹೆಸರು ಕೋಮಲ್.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬಿಜೆಪಿ ಆಗಲಿ, ಬಜರಂಗದಳಕ್ಕಾಗಲಿ, ವಿಎಚ್‌ಪಿಗೆ ಆಗಲಿ ಅಥವಾ ಆರೆಸ್ಸೆಸ್ ಪರ ಇರುವ ಯಾವುದೇ ಸಂಘಟನೆ ಅಥವಾ ಅವರ ಬೆಂಬಲಿಗರಿಗೆ ಹಿಂದೂಗಳ ಮೇಲೆ ಅಥವಾ ಮಹಿಳೆಯರ ಮೇಲೆ ಪ್ರೀತಿ ಅನುಕಂಪ ಇಲ್ಲವೇ ಇಲ್ಲ.
ಅವರ ಉದ್ದೇಶ ಅಧಿಕಾರ ಮಾತ್ರ. ಅವರು ಯಾವುದೇ ಅನ್ಯಾಯ ನಡೆದರೆ ಮಾತನಾಡುವುದು ಅಪರಾಧಿ ಮುಸ್ಲಿಂ ಸಮುದಾಯದ ವ್ಯಕ್ತಿ ಇದ್ದರೆ ಮತ್ತು ಸಂತ್ರಸ್ತರು ಹಿಂದೂಗಳು ಇದ್ದರೆ ಮಾತ್ರ.
ಅಷ್ಟೇ ✊🏿
ವಿಡಿಯೋ ನೋಡಿ 👇🏿
Comments
Post a Comment