ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನಿ ಎಂದ ಹೈಕೋರ್ಟ್ ನ್ಯಾಯಮೂರ್ತಿ | ಇದು ಜನಾಂಗೀಯ ನಿಂದನೆ ಅಲ್ಲವೇ?

ಭಾರತೀಯ ಮುಸ್ಲಿಮನನ್ನು ಪಾಕಿಸ್ತಾನಿ ಎನ್ನುವುದು ಕೇವಲ ಒಂದು ಹೇಳಿಕೆಯಲ್ಲ, ಅದೊಂದು ಜನಾಂಗೀಯವಾದಿ ನಿಂದನೆ. ದೇಶದ 20 ಕೋಟಿಯಷ್ಟಿರುವ ದೊಡ್ಡ ಸಮುದಾಯವನ್ನು 'ಪಾಕಿಸ್ತಾನಿ'ಗಳು ಎಂದು ಹೇಳಿ ಅನುಮಾನಿಸುತ್ತಾ, ಅವಮಾನಿಸಿದ್ದು ನನ್ನ ಪ್ರಕಾರ ಒಂದು ಕ್ರಿಮಿನಲ್ ಕೃತ್ಯ. 
ಆದರೆ ಇಷ್ಟು ದೊಡ್ಡ ಕೃತ್ಯ ನಡೆದರೂ ಇಲ್ಲಿನ ಜಾತ್ಯಾತೀತ ಸರ್ಕಾರ, ಪಕ್ಷಗಳು ಹೈಕೋರ್ಟ್ ನ್ಯಾಯಾಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಹೇಳಿಕೆಯ ಬಗ್ಗೆ ಒಂದು ಮಾತೂ ಆಡಿದ್ದು ನೋಡಿಲ್ಲ.

ಸಿನಿಮಾವೊಂದರಲ್ಲಿ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುವ ಪಾತ್ರದ ಮೇಲೆ ಕಾಲಿಟ್ಟ ಕಾರಣಕ್ಕೆ ಇಡೀ ವ್ಯವಸ್ಥೆ ಅಲ್ಲಾಡುತ್ತದೆ. ಆದರೆ ಮುಸ್ಲಿಮರ ವಿರುದ್ಧ ಇಷ್ಟು ದೊಡ್ಡ ಅನ್ಯಾಯ ನಡೆದರೂ ಅದೊಂದು ಸಣ್ಣ ಸುದ್ದಿಯಷ್ಟೆ. 

ಈ ವರೆಗೆ ದೇಶದ ಸರ್ಕಾರಗಳು, ಮಾಧ್ಯಮಗಳು, ಬಹುಸಂಖ್ಯಾತ ರಾಜಕಾರಣ ಇದನ್ನು ಬೇಕಾಬಿಟ್ಟಿ ಮಾಡುತ್ತಿತ್ತು. ಪ್ರತಿನಿತ್ಯ ನರಕ ಅನುಭವಿಸುವ ಅನುಮಾನಿತ ಸಮುದಾಯಕ್ಕೆ ನ್ಯಾಯಾಲಯಗಳು ಕೆಲವೊಮ್ಮೆ ಆಶಾಕಿರಣವಾಗಿ ಕಂಡಿದ್ದಿದೆ. ಆದರೆ ಈಗ ಹೈಕೋರ್ಟ್ ನೇರವಾಗಿ ಇಂತದ್ದೊಂದು ಕೃತ್ಯಕ್ಕೆ ಇಳಿದಿದೆ.

ಇಂತಹ ಜನಾಂಗೀಯವಾದಿ ಹೇಳಿಕೆ ವಿರುದ್ಧ ರಾಜ್ಯದ ಆಡಳಿತ ನಡೆಸುವ ಕಾಂಗ್ರೆಸ್ ಸೇರಿದಂತೆ ಇತರ ಜಾತ್ಯಾತೀತ ಪಕ್ಷಗಳು ಹೇಳಿಕೆ ನೀಡುವುದು ಯಾವಾಗ? ಅದರ ವಿರುದ್ಧ ಪ್ರತಿಭಟಿಸುವುದು ಯಾವಾಗ?

ನನ್ನ ಕೇಳಿದರೆ, ನ್ಯಾಯಾಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದರ ಜನಾಂಗೀಯ ನಿಂದನೆ ಹೇಳಿಕೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಬೇಕು. ಅವರನ್ನು ಬಂಧಿಸಿ ಅವರ ಈ ಹಿಂದಿನ ತೀರ್ಪುಗಳನ್ನು ಪುನರ್‌ಪರಿಶೀಲಿಸಬೇಕು. 

ಒಂದು ವೇಳೆ ಅವರು ಅದೇ ಸ್ಥಾನದಲ್ಲಿ ಮುಂದುವರೆದರೆ ಈ ದೇಶದ ಜಾತ್ಯಾತೀತ ಪರಂಪರೆಗೆ ಅವಮಾನ. ತಲೆಯಲ್ಲಿ ಇಂತಹ ವಿಷವನ್ನು ಇಟ್ಟುಕೊಂಡ ಅವರು ನೀಡಿದ ತೀರ್ಪುಗಳಾದರೂ ಹೇಗೆ ಇರಬಹುದು.

ವಿಡಿಯೋ ನೋಡಿ 

Comments