ಅಫ್ಗನ್ ಭೂಕಂಪ ಪೀಡಿತರಿಗೆ ಭಾರತ ನೆರವು


ಪ್ರವಾಹ ಮತ್ತು ಭೂಕಂಪ ಪೀಡಿತರ ನೆರವಿಗಾಗಿ ಭಾರತವು ಅಫ್ಗಾನಿಸ್ತಾನಕ್ಕೆ ತುರ್ತು ಪರಿಹಾರ ಸಾಮಾಗ್ರಿಗಳನ್ನು ರವಾನಿಸಿದೆ ಎಂದು ಪಿಟಿಐ ಸೋಮವಾರ ವರದಿ ಮಾಡಿದೆ,

ಈ ಕಷ್ಟಕಾಲದಲ್ಲಿ ಅಫ್ಗನ್ ಜನರಿಗೆ ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ವಿದೇಶಾಂತ ಸಚಿವಾಲಯದ ವಕ್ತಾನ ರಣಧೀರ್ ಜೈಸ್ವಾಲ್ ಭಾನುವಾರ ಹೇಳಿದ್ದಾರೆ.

'ಪ್ರವಾಹ ಮತ್ತು ಭೂಕಂಪದಿಂದಾಗಿ ಅಫ್ಗನ್ ಜನರು ಎದುರಿಸುತ್ತಿರುವ ಸಂಕಷ್ಟದ ಸಮಯದಲ್ಲಿ, ಭಾರತವು ಅಡುಗೆಮನೆ ಸೆಟ್‌ಗಳು, ನೈರ್ಮಲ್ಯ ಕಿಟ್‌ಗಳು, ಪ್ಲಾಸ್ಟಿಕ್ ಹಾಳೆಗಳು, ಟಾರ್ಪಲಿನ್‌ಗಳು, ಮಲಗುವ ಚೀಲಗಳು ಮತ್ತು ಇನ್ನೂ ಹೆಚ್ಚಿನ ಅತ್ಯಗತ್ಯ ವಸ್ತುಗಳನ್ನು ಒಳಗೊಂಡಂತೆ 'ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ಸಾಮಾಗ್ರಿಗಳನ್ನು ತಲುಪಿಸುತ್ತದೆ' ಎಂದು ಅವರು ಹೇಳಿದ್ದಾರೆ.

Comments