ಸೋಲೊಪ್ಪಿದ ಅಮೆರಿಕ | ಇರಾನ್‌ ವಿಧಿಸಿದ 10 ಷರತ್ತುಗಳಿವು


ಇರಾನ್ ವಿರುದ್ಧ ಸಮರ ಸಾರಿದ್ದ ಅಮೆರಿಕ-ಇಸ್ರೇಲ್ ಕೊನೆಗೂ ಸೋಲೊಪ್ಪಿಕೊಂಡು ಇರಾನ್‌ನ 10 ಅಂಶಗಳಿಗೆ ಒಪ್ಪಿ ಕದನ ವಿರಾಮಕ್ಕೆ ಮುಂದಾಗಿದೆ. 14 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಅಮೆರಿಕ ಜಾಗತಿಕವಾಗಿ ಮುಖಭಂಗಕ್ಕೆ ಈಡಾಗಿದೆ.

ಇದನ್ನೂ ಓದಿ: ಕದನ ವಿರಾಮ: ಇರಾನ್ ಮುಂದೆ ಸೋಲೊಪ್ಪಿದ ಅಮೆರಿಕ

ಪಶ್ಚಿಮ ಏಷ್ಯಾ ಸಂಘರ್ಷವನ್ನು ಕೊನೆಗಾಣಿಸಲು ಇರಾನ್ ಮುಂದಿಟ್ಟಿರುವ 10 ಅಂಶಗಳ ಪ್ರಸ್ತಾವನೆಯ ವಿವರ ಇಲ್ಲಿದೆ.

  • ಪರಸ್ಪರ ಆಕ್ರಮಣ ಮಾಡದಿರುವ ಒಪ್ಪಂದ (Non-Aggression Pact): ಅಮೆರಿಕ ಮತ್ತು ಇರಾನ್ ಭವಿಷ್ಯದಲ್ಲಿ ಪರಸ್ಪರ ಯಾವುದೇ ರೀತಿಯ ಸಶಸ್ತ್ರ ದಾಳಿ ಮಾಡಬಾರದು.
  • ಹಾರ್ಮುಜ್ ಜಲಸಂಧಿಯ ಸಾರ್ವಭೌಮತ್ವ: ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಪೂರ್ಣ ನಿಯಂತ್ರಣವನ್ನು ಅಮೆರಿಕ ಒಪ್ಪಿಕೊಳ್ಳಬೇಕು. ಇಲ್ಲಿ ಹಡಗುಗಳ ಸಂಚಾರವು ಇರಾನ್ ನೌಕಾಪಡೆಯ ಸಮನ್ವಯದೊಂದಿಗೆ ಮಾತ್ರ ನಡೆಯಬೇಕು.
  • ಯುರೇನಿಯಂ ಪುಷ್ಟೀಕರಣದ ಮಾನ್ಯತೆ: ಇರಾನ್‌ನ ನಾಗರಿಕ ಪರಮಾಣು ಕಾರ್ಯಕ್ರಮ ಮತ್ತು ಯುರೇನಿಯಂ ಪುಷ್ಟೀಕರಣದ ಹಕ್ಕನ್ನು ಅಮೆರಿಕ ಅಧಿಕೃತವಾಗಿ ಮಾನ್ಯ ಮಾಡಬೇಕು.
  • ಪ್ರಾಥಮಿಕ ನಿರ್ಬಂಧಗಳ ರದ್ದತಿ: ಅಮೆರಿಕವು ಇರಾನ್ ಮೇಲೆ ಹೇರಿರುವ ಎಲ್ಲಾ ನೇರ ಆರ್ಥಿಕ ಮತ್ತು ವ್ಯಾಪಾರ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು.
  • ದ್ವಿತೀಯ ನಿರ್ಬಂಧಗಳ ರದ್ದತಿ: ಇರಾನ್ ಜೊತೆ ವ್ಯಾಪಾರ ಮಾಡುವ ಇತರ ದೇಶಗಳ ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳನ್ನು ಕೂಡ ರದ್ದುಗೊಳಿಸಬೇಕು.
  • ವಿಶ್ವಸಂಸ್ಥೆಯ ನಿರ್ಣಯಗಳ ವಾಪಸಾತಿ: ಇರಾನ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೊರಡಿಸಿರುವ ಎಲ್ಲಾ ಆರ್ಥಿಕ ಮತ್ತು ರಾಜಕೀಯ ನಿರ್ಣಯಗಳನ್ನು ಕೈಬಿಡಬೇಕು.
  • IAEA ನಿರ್ಣಯಗಳ ಅಂತ್ಯ: ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಇರಾನ್‌ನ ಪರಮಾಣು ಚಟುವಟಿಕೆಗಳ ಬಗ್ಗೆ ಮಾಡಿರುವ ನೆಗೆಟಿವ್ ವರದಿ ಮತ್ತು ನಿರ್ಣಯಗಳನ್ನು ರದ್ದುಗೊಳಿಸಬೇಕು.
  • ಯುದ್ಧದ ನಷ್ಟ ಪರಿಹಾರ (Compensation): ಸಂಘರ್ಷದ ಅವಧಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಿಂದ ಇರಾನ್‌ಗೆ ಆಗಿರುವ ಆರ್ಥಿಕ ನಷ್ಟಕ್ಕೆ ಸಂಪೂರ್ಣ ಹಣಕಾಸು ಪರಿಹಾರ ನೀಡಬೇಕು.
  • ಪ್ರಾಂತೀಯ ಸೇನಾ ಹಿಂತೆಗೆತ: ಪಶ್ಚಿಮ ಏಷ್ಯಾ ಅಥವಾ ಗಲ್ಫ್ ವಲಯದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಯುದ್ಧ ಪಡೆಗಳನ್ನು ಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು.
  • ಒಟ್ಟಾರೆ ಪ್ರಾದೇಶಿಕ ಕದನ ವಿರಾಮ: ಇರಾನ್ ಮಾತ್ರವಲ್ಲದೆ, ಇರಾನ್ ಬೆಂಬಲಿತ ಸಂಘಟನೆಗಳಾದ ಹಿಜ್ಬುಲ್ಲಾ (ಲೆಬನಾನ್) ಮತ್ತು ಇತರ ಮಿತ್ರಕೂಟಗಳ ವಿರುದ್ಧ ನಡೆಯುತ್ತಿರುವ ದಾಳಿಗಳೂ ಸಂಪೂರ್ಣವಾಗಿ ನಿಲ್ಲಬೇಕು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಸ್ತಾವನೆಗಳನ್ನು 'ಗಮನಾರ್ಹ' ಎಂದು ಕರೆದಿದ್ದಾರೆ ಮತ್ತು ಈ ಕುರಿತು ಅಂತಿಮ ತೀರ್ಮಾನಕ್ಕಾಗಿ ಇರಾನ್ ಅಧಿಕಾರಿಗಳೊಂದಿಗೆ ಶುಕ್ರವಾರ ಪಾಕಿಸ್ತಾನದಲ್ಲಿ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ಪ್ರಜ್ಞಾಹೀನ ಸ್ಥಿತಿಯಲ್ಲಿ ಇರಾನ್‌ನ 'ಸುಪ್ರೀಂ ಲೀಡರ್': ವರದಿ

Comments