PUC Result 2026 | ಏ.9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ?


2026ರ ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಸ್ಪಷ್ಟನೆ ಸಿಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಫಲಿತಾಂಶದ ದಿನಾಂಕ ಮತ್ತು ಸಮಯವನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ. ಅಧಿಕೃತ ದೃಢೀಕರಣ ಬಾಕಿ ಇದ್ದರೂ, ಫಲಿತಾಂಶವು ಏಪ್ರಿಲ್ 9 ರಂದು ಹೊರಬರುವ ನಿರೀಕ್ಷೆಯಿದೆ.

2026ರ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆದಿದ್ದವು.

ಇದನ್ನೂ ಓದಿ: Green Asha | ಹಾರ್ಮುಜ್ ದಾಟಿದ ಭಾರತದ 8ನೇ ಹಡಗು

ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಕೆಳಗಿನ ಅಧಿಕೃತ ಪೋರ್ಟಲ್‌ಗಳ ಮೂಲಕ ಫಲಿತಾಂಶ ಪಡೆಯಬಹುದಾಗಿದೆ.

  • kseab.karnataka.gov.in
  • pue.karnataka.gov.in
  • karresults.nic.in

ಫಲಿತಾಂಶವನ್ನು ವೀಕ್ಷಿಸುವುದು ಹೇಗೆ?

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • 'Karnataka 2nd PUC Result 2026' ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಂತರ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
  • ಸಬ್‌ಮಿಟ್ ಮಾಡಿ
  • ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ

ಅಂಕಗಳನ್ನು ಪರಿಶೀಲಿಸಿದ ನಂತರ, ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ಪ್ರಿಂಟ್ ತೆಗೆದುಕೊಳ್ಳಬಹುದು.

ಪಾಸಾಗಲು ಬೇಕಾದ ಮಾನದಂಡಗಳೇನು?

  • ಒಟ್ಟಾರೆಯಾಗಿ ಕನಿಷ್ಠ ಶೇ. 33 ಅಂಕಗಳು.
  • ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 30 ಅಂಕಗಳು.

ಮೇಲಿನ ಮಾನದಂಡವನ್ನು ತಲುಪದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಬೇಕಾಗುತ್ತದೆ.

ನಿಮ್ಮ ಮಕ್ಕಳ ಫಲಿತಾಂಶ ವೀಕ್ಷಿಸಲು ನಿಮಗೆ ಸಾಧ್ಯವಾಗದೆ ಇದ್ದರೆ, ನಿಮ್ಮ ಮಕ್ಕಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮಗೆ ಕಮೆಂಟ್ ಮಾಡಿ. ನಾವು ನಿಮಗೆ ಅದನ್ನು ತಿಳಿಸುತ್ತೇವೆ.

ಇದನ್ನೂ ಓದಿ: ಪ್ರಜ್ಞಾಹೀನ ಸ್ಥಿತಿಯಲ್ಲಿ ಇರಾನ್‌ನ 'ಸುಪ್ರೀಂ ಲೀಡರ್': ವರದಿ

Comments